Sunday, August 23, 2026

BDA Apartments

Home Front Page 15ಕ್ಕೂ ಹೆಚ್ಚು ಸಚಿವರ ವಿರುದ್ಧ ‘ದೂರು ಪತ್ರ’ ಬರೆದ ಎಂ.ಪಿ.ರೇಣುಕಾಚಾರ್ಯ

15ಕ್ಕೂ ಹೆಚ್ಚು ಸಚಿವರ ವಿರುದ್ಧ ‘ದೂರು ಪತ್ರ’ ಬರೆದ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಜನವರಿ 30, 2022 (www.justkannada.in): 15 ಕ್ಕೂ ಹೆಚ್ಚು ಸಚಿವರ ವಿರುದ್ಧ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೂರು ನೀಡಿದ್ದಾರೆ.

ಬಿಜೆಪಿ ಶಾಸಕರ ಕೆಲಸಗಳಿಗೆ ಸ್ಪಂದಿಸದೆ ಕನಿಷ್ಠಪಕ್ಷ ದೂರವಾಣಿ ಕರೆಗಳನ್ನು ಸ್ವೀಕರಿಸದ ಸುಮಾರು 15 ಸಚಿವರ ವಿರುದ್ಧ ರೇಣುಕಾಚಾರ್ಯ ಲಿಖಿತವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಾಯಕರಿಗೆ ಹಲವು ಸಚಿವರ ವಿರುದ್ದ ದೂರು ಸಲ್ಲಿಸಿದ್ದು, ಇದು ಮುಂದಿನ ದಿನಗಳಲ್ಲ ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ. ಈ ಮೂಲಕ ಬಿಜೆಪಿಯಲ್ಲಿ ಒಳ ಜಗಳ ಹೊರ ಬರುತ್ತಿದೆ.

15 ಕ್ಕೂ ಹೆಚ್ಚು ಸಚಿವರ ವಿರುದ್ಧ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೂರು ನೀಡಿ ಸೂಕ್ತ ತಿಳಿವಳಿಕೆ ನೀಡುವಂತೆ ಕೋರಿದ್ದಾರೆ.