Sunday, September 6, 2026

BDA Apartments

Home Front Page ಪ್ರತಾಪ್ ಸಿಂಹ-ಜಿಟಿ ದೇವೇಗೌಡ ಭಾಯಿ ಭಾಯಿ! ಒಂದೇ ಕಾರಲ್ಲಿ ಓಡಾಟ, ಒಟ್ಟಿಗೆ ಬಾಡೂಟ !

ಪ್ರತಾಪ್ ಸಿಂಹ-ಜಿಟಿ ದೇವೇಗೌಡ ಭಾಯಿ ಭಾಯಿ! ಒಂದೇ ಕಾರಲ್ಲಿ ಓಡಾಟ, ಒಟ್ಟಿಗೆ ಬಾಡೂಟ !

ಮೈಸೂರು, ಜೂನ್ 23,2019 (www.justkannada.in): ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಒಂದಾಗಿದೆ

ಸಚಿವ ಜಿ.ಟಿ.ದೇವೇಗೌಡ- ಸಂಸದ ಪ್ರತಾಪ್ ಸಿಂಹ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಂದರ್ಭ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಪಕ್ಷ ಬೇಧ ಮರೆತು ಇಬ್ಬರೈ ಜನಪ್ರತಿನಿಧಿಗಳು ಒಂದಾಗಿದ್ದಾರೆ.

ಮೈಸೂರು ತಾಲೂಕಿನ ಮರಟಿ ಕ್ಯಾತನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಂಕುಸ್ಥಾಪನೆ, ಶುದ್ಧ ಕುಡಿಯುವ ನೀರಿನ ಘಟಕವನ್ನು ಇಬ್ಬರೂ ಸೇರಿ ಉದ್ಘಾಟಿಸಿದ್ದಾರೆ. ಜತೆಗೆ ಒಂದೇ ಕಾರಿನಲ್ಲಿ ಜಿಟಿಡಿ, ಪ್ರತಾಪ್ ಸಿಂಹ ಓಡಾಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ತಾಲೂಕು ಪಂಚಾಯಿತಿ ಜೆಡಿಎಸ್ ಸದಸ್ಯೆ ಮನೆಯಲ್ಲಿ ಅಕ್ಕಪಕ್ಕ ಕುಳಿತು ಬಾಡೂಟ ಸವಿದ ನಾಯಕರು. ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲೀಡ್ ದೊರೆತ್ತಿತ್ತು. ಹೀಗಾಗಿ ಜಿಟಿಡಿ ಜತೆ ಪ್ರತಾಪ್ ಸಿಂಹ ನಿಕಟವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.