Thursday, August 13, 2026

BDA Apartments

Home Front Page ಕಳೆದ 1 ವರ್ಷದಿಂದ ಉಸಿರಾಟ ಸಮಸ್ಯೆ ಇತ್ತು: ದೇವೇಗೌಡರು ಚೆನ್ನಮ್ಮರದ್ದು ಅನ್ಯೂನ್ಯ ಸಂಬಂಧ- ಸಂಸದ ಡಾ.ಸಿ.ಎನ್...

ಕಳೆದ 1 ವರ್ಷದಿಂದ ಉಸಿರಾಟ ಸಮಸ್ಯೆ ಇತ್ತು: ದೇವೇಗೌಡರು ಚೆನ್ನಮ್ಮರದ್ದು ಅನ್ಯೂನ್ಯ ಸಂಬಂಧ- ಸಂಸದ ಡಾ.ಸಿ.ಎನ್ ಮಂಜುನಾಥ್

ಬೆಂಗಳೂರು,ಜುಲೈ,18,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು, ಹಲವು ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದ ಡಾ.ಸಿ.ಎನ್ ಮಂಜುನಾಥ್, ಚೆನ್ನಮ್ಮ ಅವರಿಗೆ  ಕಳೆದ 1 ವರ್ಷದಿಂದ ಉಸಿರಾಟದ ಸಮಸ್ಯೆ ಇತ್ತು. ಕಳೆದ  6 ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. 10 ದಿನಗಳ ಹಿಂದೆ ಚೆನ್ನಮ್ಮ ಅವರು ಆರೋಗ್ಯವಾಗಿದ್ದರು.  ದೇವೇಗೌಡರು ಚೆನ್ನಮ್ಮ ಅವರದ್ದು ಅನ್ಯೂನ್ಯ ಸಂಬಂಧ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.  ಕುಟಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಮುಂದಿನ ಕಾರ್ಯದ ಬಗ್ಗೆ ಕುಟುಂಬ ಚರ್ಚಿಸುತ್ತಿದೆ ಎಂದಿದ್ದಾರೆ.

Key words: Former PM, H.D. Deve Gowda’s, wife, Chennamma, no more, MP, Dr. C.N. Manjunath