Thursday, October 22, 2026

Dasara Wishes

Happy Dasara
Home Front Page ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳ: ಇಂದೇ ಬೀಳ್ಕೊಡುಗೆ

ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳ: ಇಂದೇ ಬೀಳ್ಕೊಡುಗೆ

ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳ: ಇಂದೇ ಬೀಳ್ಕೊಡುಗೆ

ಮೈಸೂರು,ಅಕ್ಟೋಬರ್,22,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಿನ್ನೆ ಜಂಬೂಸವಾರಿ ಮೆರವಣಿಗೆ ತೆರೆ ಬಿದ್ದಿದೆ. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಪ್ರಶಾಂತ ಹೆಜ್ಜೆ ಹಾಕಿ  ಮೈಸೂರು ದಸರಾ ಯಶಸ್ವಿಗೊಳಿಸಿದ್ದಾನೆ.  ಈ ನಡುವೆ ದಸರಾದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳವಾಗಿದೆ.

ಹೌದು, ನಿನ್ನೆ ನಡೆದ ಜಂಬೂಸವಾರಿ ಬಳಿಕ  ಇದೀಗ ದಸರಾ ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಂ ಅಂಡ್ ಕಂನಲ್ಲಿ  ತೂಕಪರೀಕ್ಷೆ ನಡೆಸಲಾಗಿದ್ದು ಆನೆಗಳ ತೂಕ ಹೆಚ್ಚಾಗಿದೆ.ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

ಇಂದೇ ಅರಮನೆಯಿಂದ ಗಜಪಡೆ ಕಾಡಿನತ್ತ ತೆರಳಲಿದ್ದು 12 ಗಂಟೆಗೆ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಲಿದೆ.  ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ಮುನ್ನ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದ್ದು ತೂಕದ ವಿವರ ಹೀಗಿದೆ.ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಅಭಿಮನ್ಯು – 5585

ರೂಪ-3290

ಮಹೇಂದ್ರ -5620

ಗೋಪಿ-5415

ಸುಗ್ರೀವ-6105

ಶ್ರೀರಾಮ-5150 ಕೆಜಿ

ಚೈತ್ರಾ-3520

ಶ್ರೀಕಂಠ – 6040 ಕೆಜಿ

ಏಕಲವ್ಯ – 5915

ಕಾವೇರಿ -3285

ಪ್ರಶಾಂತ -5425

ಲಕ್ಷ್ಮೀ -4010

ಧನಂಜಯ -5570

ನಾಡಹಬ್ಬ ದಸರಾ ಯಶಸ್ವಿಗೆ ಪ್ರಶಾಂತ ಆನೆ ಕಾರಣ- ಅರಣ್ಯಾಧಿಕಾರಿ ಪ್ರಭುಗೌಡ

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಹಿರಿಯ ಅರಣ್ಯಾಧಿಕಾರಿ ಪ್ರಭುಗೌಡ ಹೇಳಿಕೆ ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿದಿದೆ. ಪ್ರಶಾಂತ ಆನೆ ಯಶಸ್ಸಿಗೆ ಕಾರಣರಾಗಿದ್ದಾನೆ. ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಎಲ್ಲಾ‌ ಆನೆಗಳ ಹೆಲ್ತ್ ಮೆಂಟೈನ್ ಮಾಡಿದ್ದೀವಿ. ಪ್ರಶಾಂತ ಆನೆ ಸೌಮ್ಯ ಸ್ವಭಾವದ ಆನೆ. ಪ್ರಶಾಂತನಿಗೆ ಉತ್ತಮ ಟ್ರೈನಿಂಗ್ ಮಾಡಲಾಗಿತ್ತು. ದಸರಾ ಯಶಸ್ಸಿಗೆ ಶ್ರಮಿಸಿದವರೆಲ್ಲರಿಗೂ ಕೃತಜ್ಞತೆಗಳು ಎಂದರು.ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳ: ಇಂದೇ ಬೀಳ್ಕೊಡುಗೆ

ಇಂದೇ ಕಾಡಿಗೆ ಮರಳುತ್ತಿರುವ ವಿಚಾರ, ಈ ಕುರಿತು ಹೈ ಪವರ್ ಕಮಿಟಿ ಮೀಟಿಂಗ್ ನಲ್ಲೇ ತೀರ್ಮಾನ ಆಗಿತ್ತು. ಸಾಮಾನ್ಯವಾಗಿ ದಸರಾ ಮುಗಿದ ಮರುದಿನ ಆನೆಗಳು ರಿಲ್ಯಾಕ್ಸ್ ನಲ್ಲಿ ಇರುತ್ತಿದ್ದವು. ಈ ಬಾರಿ ನಾಳೆ ಶುಕ್ರವಾರ ಇದೆ. ಈ ಕಾರಣಕ್ಕೆ ಇಂದೇ ಗಜಪಡೆ ಕಳುಹಿಸುವ ತೀರ್ಮಾನ ಮಾಡಲಾಗಿದೆ ಎಂದರು.

 

English Summary
Title

Mysuru Dasara 2026: Elephant Weight Gain Records & Farewell Today

Short Description
The curtains have officially closed on Mysuru Dasara 2026 following the grand Jamboo Savari procession. Today, the revered Dasara elephants receive a warm, ceremonial farewell before returning to their forest camps. During their 50-day stay at the Mysuru Palace, the squad underwent intensive training and received a specialized, high-protein diet. This resulted in significant elephant weight gain across the herd, with heavyweights like Sugreeva and Srikanta packing on healthy muscle. The festival also marked a historic milestone as Prashantha successfully carried the 750-kg Golden Howdah for the first time, while veteran tusker Abhimanyu made his final ceremonial appearance before official retirement.
Keywords
Mysuru Dasara, Weight, elephants, increased