Thursday, August 6, 2026

BDA Apartments

Home Crime ತಾಯಿ ಹಾಗೂ ಮಕ್ಕಳು ಸೇರಿ ಮೂವರು ಆತ್ಮಹತ್ಯೆಗೆ ಶರಣು.

ತಾಯಿ ಹಾಗೂ ಮಕ್ಕಳು ಸೇರಿ ಮೂವರು ಆತ್ಮಹತ್ಯೆಗೆ ಶರಣು.

ಬೆಂಗಳೂರು,ಮಾರ್ಚ್,20,2024(www.justkannada.in): ತಾಯಿ ಹಾಗೂ ಮಕ್ಕಳಿಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಜೆ.ಪಿ ನಗರದ 3ನೇ ಹಂತದಲ್ಲಿ ಈ ಘಟನೆ ನಡೆದಿದೆ. ತಾಯಿ ಸುಕನ್ಯ ಇಬ್ಬರು ಮಕ್ಕಳಾದ ನಿಖಿತ್, ನಿಶಿತ್  ಆತ್ಮಹತ್ಯೆಗೆ ಶರಣಾದವರು. ಸಾಲಬಾಧೆಯಿಂದ ಬೇಸತ್ತು ಸುಕನ್ಯ ತಮ್ಮ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಜೆ.ಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Key words: Mother – children – three -surrendered – suicide.