Thursday, August 6, 2026

BDA Apartments

Home Front Page ಕಾಂಗ್ರೆಸ್ ನನ್ನನ್ನು ಸಂಪರ್ಕಿಸಿದೆ: ನಾಳೆ ನನ್ನ ನಿರ್ಧಾರ ಪ್ರಕಟ- ಸಂಸದ ಡಿ.ವಿ ಸದಾನಂದಗೌಡ.

ಕಾಂಗ್ರೆಸ್ ನನ್ನನ್ನು ಸಂಪರ್ಕಿಸಿದೆ: ನಾಳೆ ನನ್ನ ನಿರ್ಧಾರ ಪ್ರಕಟ- ಸಂಸದ ಡಿ.ವಿ ಸದಾನಂದಗೌಡ.

ಬೆಂಗಳೂರು,ಮಾರ್ಚ್,19,2024(www.justkannada.in):  ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಅಸಮಾಧಾನ ಸ್ಪೋಟಗೊಂಡಿದ್ದು ಈಗಾಗಲೇ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಈ ನಡುವೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆ ಬೇಸರಗೊಂಡಿರುವ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ನಾಳೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಸಂಸದ ಡಿ.ವಿ ಸದಾನಂದಗೌಡ ಅವರನ್ನ ಕಾಂಗ್ರೆಸ್ ಸೆಳೆಯಲು ಯತ್ನಿಸುತ್ತಿದೆ. ಈ ಕುರಿತು ಸ್ವತಃ ಡಿ.ವಿ ಸದಾನಂದಗೌಡರೇ ಸ್ಪಷ್ಟನೆ ನೀಡಿದ್ದು, ಇಂದು ನನ್ನನ್ನು ಕಾಂಗ್ರೆಸ್ ಪಕ್ಷದವರು ಸಂಪರ್ಕಿಸಿದ್ದಾರೆ. ನಾಳೆ ನನ್ನ ಎಲ್ಲಾ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.

ನನಗೆ ಕಾಂಗ್ರೆಸ್ ನವರು ಸಂಪರ್ಕ ಮಾಡಿದ್ದಾರೆ. ನಾನು ಸಕಾಲಕ್ಕೆ ತೀರ್ಮಾನ ಮಾಡುತ್ತೇನೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇನೆ ಅಂತ ನಾಳೆ ತೀರ್ಮಾನ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.

Key words: Congress -contacted –me- My decision –tomorrow- MP- DV Sadanand Gowda.