Thursday, August 6, 2026

BDA Apartments

Home Front Page ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಿ.ವಿ ಸದಾನಂದಗೌಡರನ್ನ ಕಣಕ್ಕಿಳಿಸಲು ನಿರ್ಧಾರ..?

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಿ.ವಿ ಸದಾನಂದಗೌಡರನ್ನ ಕಣಕ್ಕಿಳಿಸಲು ನಿರ್ಧಾರ..?

ಬೆಂಗಳೂರು ,ಮಾರ್ಚ್,20,2024(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಟಿಕೆಟ್ ವಂಚಿತರು ಬೇಸರ ವ್ಯಕ್ತಪಡಿಸಿದ್ದು ಈ ಮಧ್ಯೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಸಂಸದ ಡಿ.ವಿ ಸದಾನಂದಗೌಡರು ಕೂಡ ಅಸಮಾಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.ವಿ ಸದಾನಂದಗೌಡರನ್ನ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್  ನಿರ್ಧಾರ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಮಾಜಿ ಸಿಎಂ ಸದಾನಂದ ಗೌಡ ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್ ನಿರ್ಧಾರ ಮಾಡಿದ್ದಾರೆ ಚಿಕ್ಕಬಳ್ಳಾಪುರದಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ನಿನ್ನೆ ಡಿ.ವಿ ಸದಾನಂದ ಗೌಡರ ಜೊತೆ ದೂರವಾಣಿ ಮೂಲಕ  ಪಕ್ಷದ ವರಿಷ್ಠರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆ ಮಾಜಿ ಸಿಎಂ ಸದಾನಂದಗೌಡ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಇರಿಸಿಕೊಂಡಿದೆ. ಹೈಕಮಾಂಡ್ ದೂರವಾಣಿ ಕರೆಯ ಬಳಿಕ ಸದಾನಂದ ಗೌಡರು  ಇಂದು ನಡೆಸಬೇಕಿದ್ದ ಸುದ್ದಿಗೋಷ್ಠಿಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ.

Key words: bjp-Decision – DV Sadananda Gowda – Chikkaballapur -Constituency