Monday, September 21, 2026

BDA Apartments

ಡಿಕೆ ಶಿವಕುಮಾರ್ ಸಿಎಂ ಆದ್ರೆ ದೊಡ್ಡ ಅಪಾಯ- ಶಾಸಕ ಯತ್ನಾಳ್ BDA JK_Adv BDA Adv
Home Front Page ಡಿಕೆ ಶಿವಕುಮಾರ್ ಸಿಎಂ ಆದ್ರೆ ದೊಡ್ಡ ಅಪಾಯ- ಶಾಸಕ ಯತ್ನಾಳ್

ಡಿಕೆ ಶಿವಕುಮಾರ್ ಸಿಎಂ ಆದ್ರೆ ದೊಡ್ಡ ಅಪಾಯ- ಶಾಸಕ ಯತ್ನಾಳ್

ಕೊಪ್ಪಳ.ಮೇ,8,2026 (www.justkannada.in): ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾದರೇ ದೊಡ್ಡ ಅಪಾಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿಕೆ ಶಿವಕುಮಾರ್ ಸಿಎಂ ಆದರೆ ಕರ್ನಾಟಕವನ್ನು 10 ಬಾರಿ ಮಾರಾಟ ಮಾಡುತ್ತಾರೆ. ಸಿದ್ದರಾಮಯ್ಯ ಒಂದು ಬಾರಿ ಕರ್ನಾಟಕ ಮಾರಾಟ ಮಾಡಿದ್ದಾರೆ. ಡಿಕೆ ಶಿವಕುಮಾರ್ 10 ಮಾರಿ ಕರ್ನಾಟಕ ಮಾರಾಟ ಮಾಡುತ್ತಾರೆ.  ರಾಜಕಾರಣದಲ್ಲಿ ಡಿಕೆಶಿ  ಅಂದರೆ  ದೊಡ್ಡ ರಾಕ್ಷಸ ಇದ್ದಂತೆ ಎಂದರು.

ಸಿಎಂ ಬದಲಾವಣೆ ವಿಚಾರ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಯಾರೇ ಮುಂದುವರೆದರೂ ಭ್ರಷ್ಟಾಚಾರ ಕಡಿಮೆಯಾಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Key words: DK Shivakumar, CM, Danger, MLA, Yatnal