Tuesday, September 22, 2026

BDA Apartments

ಬಿಜೆಪಿಯಲ್ಲಿ ಮತ್ತೊಂದು ವಿಕೆಟ್ ಪತನ: ಬಿಜೆಪಿಗೆ ಶಾಸಕ ನೆಹರು ಓಲೇಕಾರ್ ರಾಜೀ...
Home Front Page ಬಿಜೆಪಿಯಲ್ಲಿ ಮತ್ತೊಂದು ವಿಕೆಟ್ ಪತನ: ಬಿಜೆಪಿಗೆ  ಶಾಸಕ ನೆಹರು ಓಲೇಕಾರ್ ರಾಜೀನಾಮೆ.

ಬಿಜೆಪಿಯಲ್ಲಿ ಮತ್ತೊಂದು ವಿಕೆಟ್ ಪತನ: ಬಿಜೆಪಿಗೆ  ಶಾಸಕ ನೆಹರು ಓಲೇಕಾರ್ ರಾಜೀನಾಮೆ.

ಹಾವೇರಿ,ಏಪ್ರಿಲ್,13,2023(www.justkannada.in):  ಟಿಕೆಟ್​ ಸಂಬಂಧ ಬಿಜೆಪಿಯಲ್ಲಿ ಬಂಡಾಯದ ಬಿಸಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ರಾಜೀನಾಮೆ ಪರ್ವ ಮುಂದುವರೆದಿದೆ. ಇದೀಗ ಮತ್ತೋರ್ವ ಶಾಸಕ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಶಾಸಕ ನೆಹರೂ ಓಲೇಕಾರ್​ ಸಹ ಬೆಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.  ಹುಕ್ಕೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.  ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಹರೂ ಓಲೇಕಾರ್, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್ ನಿಂದ  ಆಹ್ವಾನ ಬಂದಿದೆ. ಕಾರ್ಯಕರ್ತರ ಜತೆ ಮಾತನಾಡಿ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.ಬಿಜೆಪಿಯಲ್ಲಿ ಮತ್ತೊಂದು ವಿಕೆಟ್ ಪತನ neharu neharu 1

ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡತ ಬಿದ್ದಿದೆ. ತನಗೆ ಅನುಕೂಲ ಆಗುವವರಿಗೆ ಟಿಕೆಟ್​ ಕೊಡಿಸಿದ್ದಾರೆ. ನನಗೆ ಟಿಕೆಟ್​ ತಪ್ಪಿಸೋ ಹುನ್ನಾರ ನಡೆಯಿತು , ಅವರ ಕೈ ಚೀಲ ಆದವರಿಗೆ ಟಿಕೆಟ್​ ಕೊಡಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.

Key words: MLA -Nehru Olekar- resigns -BJP.