Tuesday, September 22, 2026

BDA Apartments

ಶಾಸಕ ಮುನಿರತ್ನ ಬಂಧನಕ್ಕೆ ಆಗ್ರಹ: ಮೈಸೂರಿನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರ...
Home Front Page ಶಾಸಕ ಮುನಿರತ್ನ ಬಂಧನಕ್ಕೆ ಆಗ್ರಹ: ಮೈಸೂರಿನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಶಾಸಕ ಮುನಿರತ್ನ ಬಂಧನಕ್ಕೆ ಆಗ್ರಹ: ಮೈಸೂರಿನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಮೈಸೂರು,ಸೆಪ್ಟಂಬರ್,14,2024 (www.justkannada.in): ದಲಿತರ ವಿರುದ್ದ ಅವಾಚ್ಯ  ಶಬ್ದಗಳಿಂದ ನಿಂದಿಸಿದ ಆರ್.ಆರ್  ನಗರ ಶಾಸಕ ಮುನಿರತ್ನರನ್ನ ಬಂಧಿಸಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಬಲ್ಲಾಳ್ ವೃತ್ತದಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ಮುನಿರತ್ನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಮುನಿರತ್ನರನ್ನ ಬಂಧಿಸದೆ ಹೋದಲ್ಲಿ ರಾಜ್ಯದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ಕೊಟ್ಟರು. ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ನಿಂದಿಸಿ ಗುತ್ತಿಗೆದಾರನ ಹೆಂಡತಿಯನ್ನ ಮಂಚಕ್ಕೆ ಕರೆದ ಆರೋಪ ಶಾಸಕ ಮುನಿರತ್ನ ಮೇಲಿದೆ.

Key words: MLA, Munirath, arrest, Protest, Mysore