ಬೆಳಗಾವಿಗೆ ಹೋಗ್ತೇನೆ. ಆದರೆ ಅಧಿವೇಶನಕ್ಕೆ ಹೋಗಲ್ಲ- ಸಚಿವ ಸ್ಥಾನ ಸಿಗದಿದ್ದಕ್ಕೆ ಕೆ.ಎಸ್ ಈಶ್ವರಪ್ಪ ಬಹಿರಂಗ ಅಸಮಾಧಾನ.

ಬಾಗಲಕೋಟೆ,ಡಿಸೆಂಬರ್,19,2022(www.justkannada.in): ಸಚಿವ ಸಂಪುಟಕ್ಕೆ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆ ಶಾಸಕ ಕೆ.ಎಸ್ ಈಶ್ವರಪ್ಪ ಮತ್ತೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ. ಕ್ಲಿನ್ ಚಿಟ್ ನೀಡಲಾಗಿದೆ. ನಿಮ್ಮನ್ನ ಮಂತ್ರಿ ಮಾಡುತ್ತೇವೆ ಎಂದು ಸಿಎಂ ಹೇಳ್ತಾನೆ ಬಂದಿದ್ದಾರೆ. ನಿಮ್ಮಂತವರು ಸಂಪುಟಕ್ಕೆ ಬೇಕು ಅಂತಾರೆ.ಆದರೆ ನನ್ನನ್ನ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳುತ್ತಿಲ್ಲ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.BJP-Minister- KS Eshwarappa-kalburgi

ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗಲ್ಲ. ನನಗೆ ಅಪಮಾನ ಆಗುತ್ತಿದೆ. ಸೌಜನ್ಯ ರೀತಿ ಪ್ರತಿಭಟನೆ ಮಾಡುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ನುಡಿದರು.

Key words: MLA-KS Eshwarappa- expressed -displeasure – ministerial- post.