ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಬಗ್ಗೆ ಚರ್ಚೆಯಾಗದಂತೆ ದಾರಿ ತಪ್ಪಿಸಲು ಸಾವರ್ಕರ್ ಫೊಟೊ ಅಳವಡಿಕೆ-ಡಿ.ಕೆ ಶಿವಕುಮಾರ್ ಟೀಕೆ.

ಬೆಳಗಾವಿ,ಡಿಸೆಂಬರ್,19,2022(www.justkannada.in):  ಸುರ್ವಣಸೌಧದಲ್ಲಿ ವೀರ ಸಾವರ್ಕರ್ ಫೋಟೊ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ದಾರಿ ತಪ್ಪಿಸಲು ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದೆ.  ಭ್ರಷ್ಟಾಚಾರ, ವೋಟ್ ಕದ್ದಿದ್ದು, 40 ಪರ್ಸೆಂಟ್ ಕಮಿಷನ್ ಬಗ್ಗೆ ಚರ್ಚೆ ಆಗಬಾರದು ಅಂತಾನೇ ಫೋಟೊ ಹಾಕಿದೆ ಎಂದು ಆರೋಪಿಸಿದರು.

ನಾವು ಹಿಂದೂಗಳಾಗಿ ಹುಟ್ಟಿದ್ದೇವೆ. ಹಿಂದೂಗಳಾಗಿಯೇ ಸಾಯುತ್ತೇವೆ. ಬಿಜೆಪಿಯವರದ್ದೆಲ್ಲಾ ನಾಟಕ. ಸಿಎಂ ಬೊಮ್ಮಾಯಿ ಫೋಟೊ ಹಾಕಿರೋದು ಗೊತ್ತಿಲ್ಲ ಅಂತಾರೆ. ಎಲ್ಲದರೂ ಉಂಟಾ ಮುಖ್ಯಮಂತ್ರಿಗಳೇ..? ಸಿಎಂ ಸುಳ್ಳಿನ ರಾಜ.  ನೀವು ನಿಮಗೆ ಬೇಕಾಗಿದ್ದನ್ನ ಸಮರ್ಥನೆ ಮಾಡಿಕೊಳ್ಳಿ . ನಾನು ನಿಮಗೆ ಸುಳ್ಳಿನ ರಾಜ ಎಂದು ಹೆಸರಿಡಬೇಕು ಎಂದಿದ್ದೇನೆ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದರು.

Key words:  Savarkar- photo – avoid -discussion – 40 percent -commission-DK Shivakumar