ಬೆಳಗಾವಿ ಗಡಿ ನುಗ್ಗಲು ಯತ್ನಿಸಿ ಪುಂಡಾಟ ಮೆರೆದ ಎಂಇಎಸ್, ಶಿವಸೇನೆ ಕಾರ್ಯಕರ್ತರು ಪೊಲೀಸರ ವಶಕ್ಕೆ.

ಬೆಳಗಾವಿ,ಡಿಸೆಂಬರ್,19,2022(www.justkannada.in): ಒಂದೆಡೆ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೇ ಇನ್ನೊಂದಡೆ ಬೆಳಗಾವಿ ಗಡಿಯನ್ನು ಪ್ರವೇಶಿಸಲು ಯತ್ನಿಸಿ ಪುಂಡಾಟ ಮೆರೆದ ಎಂಇಎಸ್ ಶಿವಸೇನೆ ಪುಂಡರನ್ನ ಪೊಲೀಸರು ವಶಕ್ಕೆ ಪಡೆದರು.

ಈ ಬಾರಿ ಎಂಇಎಸ್  ಮಹಾಮೇಳವ್ ಗೆ ಬ್ರೇಕ್ ಹಾಕಿದ ಹಿನ್ನೆಲೆ ಎಂಇಎಸ್, ಶೀವಸೇನೆ, ಎನ್ ಸಿಪಿ ಕಾರ್ಯಕರ್ತರು ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಗಡಿ ನುಗ್ಗಲು ಯತ್ನಿಸಿದರು.

ಈ ವೇಳೆ ಪೊಲೀಸರು ಮತ್ತು  ಶೀವಸೇನೆ, ಎಂಇಎಸ್ ಪುಂಡರ ನಡುವೆ ನೂಕಾಟ ತಳ್ಳಾಟ ನಡೆಯಿತು.  ಗಡಿ ಪ್ರವೇಶಿಸದಂತೆ ಕಾಗಲ್ ಠಾಣಾ ಪೊಲೀಸರು ಸೂಚಿಸಿದರೂ ಸಹ ಕ್ಯಾರೆ ಎನ್ನದೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟಿಕೆ ತೋರಿದರು. ಈ ವೇಳೆ ಶೀವಸೇನೆ, ಎಂಇಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ಮೂಲಕ ಮತ್ತೆ ಬಾಲಬಿಚ್ಚಿದ ಎಂಇಎಸ್ ಗೆ ತಕ್ಕ ಪಾಠ ಕಲಿಸಿದ್ದಾರೆ.

Key words: MES- Shiv Sena -activists – Belgaum -border Arrest