Thursday, August 20, 2026

BDA Apartments

Home Front Page ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಆಯ್ಕೆ ಸಾಧ್ಯತೆ…

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಆಯ್ಕೆ ಸಾಧ್ಯತೆ…

ಬೆಂಗಳೂರು,ಜೂ,28,2019(www.justkannada.in):  ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಅವರಿಂದ ತೆರವಾದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಕಲೇಶಪುರ ಶಾಸಕ ಹೆಚ್.ಕೆ ಕುಮಾರಸ್ವಾಮಿ ಅವರನ್ನ ನೇಮಿಸುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಸೋಲಾಗಿದ್ದು, ಜೆಡಿಎಸ್ ಸೋತಿದ್ದಕ್ಕೆ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದರು. ಆದರೆ ಹೆಚ್. ವಿಶ್ವನಾಥ್ ಅವರ ರಾಜೀನಾಮೆಯನ್ನ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಅಂಗೀಕರಿಸಿಲ್ಲ. ಅಲ್ಲದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವಂತೆ ಹೆಚ್.ಡಿ ದೇವೇಗೌಡರು ಸೇರಿ ಜೆಡಿಎಸ್ ನಾಯಕರು ಹೆಚ್.ವಿಶ್ವನಾಥ್ ಮನವೊಲಿಕೆ ಮಾಡಲು ಯತ್ನಿಸಿದರು.

ಈ ನಡುವೆ ಹೆಚ್.ವಿಶ್ವನಾಥ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗೆ ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ನೇಮಕ ಮಾಡಲು ಹೆಚ್.ಡಿ ದೇವೇಗೌಡರು ಮುಂದಾಗಿದ್ದಾರೆ. ಸಕಲೇಶಪುರ ಶಾಸಕ ಹೆಚ್.ಕೆ ಕುಮಾರಸ್ವಾಮಿ ಅವರನ್ನ ನೇಮಿಸುವ ಸಾಧ್ಯತೆ ಇದ್ದು, ಇಂದು ಹೆಸರನ್ನ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

Key words: MLA-HK Kumaraswamy- elect-  JDS president