Sunday, August 16, 2026

BDA Apartments

Home Front Page ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಬೆಂಗಳೂರು,ಅ.19,2019(www.justkannada.in):  ರಾಜ್ಯದ ನೆರೆ ಸಂತ್ರಸ್ತರ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ವಿರುದ್ದವೇ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕೊಟ್ಟಿದ್ದಾರೆ.

ಇ- ಮೇಲ್ ಮೂಲಕ ನೋಟೀಸ್ ಗೆ ಉತ್ತರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಪಕ್ಷದ ವಿರುದ್ದ ಮಾತನಾಡಿಲ್ಲ. ಶಾಸಕ ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ.  ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆಯನ್ನ ನಾನು ನೀಡಿಲ್ಲ. ನೆರೆ ಸಂತ್ರಸ್ತರ ಸ್ಥಿತಿ ನೋಡಿ ನನಗೆ ಕಣ್ಣೀರು ಬಂತು.  ಮಾಧ್ಯಮಗಳ ವರದಿ ನೋಡಿ ನನಗೆ ಮಾನಸಿಕ ನೋವು ಉಂಟಾಗಿತ್ತು.  ಹೀಗಾಗಿ ನೊಂದು ಪಕ್ಷದ ವಿರುದ್ದ ಮಾತನಾಡಿದೆ ಹೊರತು ಇದರಲ್ಲಿ ಯಾವುದೇ ದುರದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಪಕ್ಷದ ಶಿಸ್ತಿನ ಸಿಪಾಯಿ.  ನನಗೆ ನನ್ನ ಭಾಗದ ಜನರ ಸ್ಥಿತಿ ನೋಡಿ  ನೋವು ಉಂಟಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಹೇಳಿಕೆ ನೀಡಿದ್ದೆ. ನನ್ನ ಈ ಹೇಳಿಕೆಯಲ್ಲಿ ಬೇರೆ ಉದ್ದೇಶವಿಲ್ಲ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ. ನನ್ನ ಹೇಳಿಕೆಯಿಂದ ತಪ್ಪಾಗಿದ್ದರೇ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಸನಗೌಡ ಪಾಟೀಲ್  ಪತ್ರದಲ್ಲಿ ತಿಳಿಸಿದ್ದಾರೆ.

Key words:  MLA -Basnagouda Patil Yatnal- answered -notice – BJP disciplinary committee.