ಮಾಜಿ ಸಿಎಂ ಸಿದ್ಧರಾಮಯ್ಯ ಮೇಲೆ ಐಟಿ ದಾಳಿಯಾದ್ರೆ ಸಿಗೋದು ಬರೀ ಜುಬ್ಬಾ ಪೈಜಾಮ ಅಂತೆ…!

ಮೈಸೂರು,ಅ,19,2019(www..justkannada.in):  ಪ್ರಧಾನಿ ಮೋದಿ ಅಮಿತ್ ಶಾ ಗೆ ಸಿದ್ದರಾಮಯ್ಯ ಮೇಲೆ ಕಣ್ಣಿದೆ. ಬೇರೆ ನಾಯಕರ ಹಾಗೆ ಸಿದ್ದರಾಮಯ್ಯ ಮೇಲೂ ಐಟಿ ದಾಳಿ ಮಾಡಿದ್ರೆ  ಬರಿ ಜುಬ್ಬಾ ಪೈಜಾಮ ಸಿಗತ್ತೆ ಅಷ್ಟೇ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ವೆಂಕಟೇಶ್, ಸಿದ್ದರಾಮಯ್ಯ ದುಡ್ಡು ಮಾಡೋರಲ್ಲಾ,  ಅವರತ್ರ ಹುಡ್ಕೊಕಿಕೊಂಡರೂ ಎಲ್ಲೂ ದುಡ್ಡು ಸಿಗಲ್ಲ. ಅವರಲ್ಲಿ ಸಿಗೋದು ಜುಬ್ಬಾ ಪೈಜಾಮ ಅಷ್ಟೇ ಮತ್ತೇನು ಅಲ್ಲಾ. ಯಾವತ್ತೂ ದುಡ್ಡು ಮಾಡಬೇಕು ಎಂದು ಹೊರಟವರಲ್ಲ, ದುಡ್ಡು ಮಾಡೋದು ಅವರಿಗೆ ಇಷ್ಟಾನು ಇಲ್ಲ ಎಂದು ಹೇಳಿದರು.

ನಾವುಗಳೇ ಚುನಾವಣೆ ನಡೆದಾಗ ದುಡ್ಡು ಕೇಳೋಕ್ ಹೋದ್ರೆ  ಅವರಿಗೆ ಹೇಳ್ತಿನಿ, ಇವರಿಗೆ ಹೇಳ್ತಿನಿ ಹೋಗಿ ಇಸ್ಕೊ ಎಂದು ಹೇಳಿ ಚುನಾವಣೆ ಮುಗಿಸ್ತಾರೇ… ಅಂತವರ ಹತ್ರ ಎಲ್ಲಿ ದುಡ್ಡು ಇರತ್ತೆ ಹೇಳಿ ಎಂದು ಐಟಿ ದಾಳಿ ವಿಚಾರ ಕುರಿತು ಮಾಜಿ ಶಾಸಕ ಕೆ. ವೆಂಕಟೇಶ್  ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Key words: mysore- Former CM –Siddaramaiah- IT attack – Jubba pajama