Sunday, September 20, 2026

BDA Apartments

Home Front Page ವಿಶ್ವಕಪ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್

ವಿಶ್ವಕಪ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್

ಲಂಡನ್, ಜೂನ್ 07, 2019 (www.justkannada.in): ವಿಶ್ವಕಪ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ 15 ರನ್ ಗಳ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಜೊತೆಗೆ ವಿಶ್ವಕಪ್ ನಲ್ಲಿ ಮಿಚೆಲ್ ದಾಖಲೆ ಬರೆದಿದ್ದಾರೆ.

ಮಿಚೆಲ್, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಸಾಕ್ಲೈನ್ ಮುಷ್ತಾಖ್ ದಾಖಲೆಯನ್ನು ಮುರಿದಿದ್ದಾರೆ. ಕಡಿಮೆ ಏಕದಿನ ಪಂದ್ಯವನ್ನಾಡಿ 150 ವಿಕೆಟ್ ಕಬಳಿಸಿದ್ದ ದಾಖಲೆ ಸಾಕ್ಲೈನ್ ಮುಷ್ತಾಖ್ ಹೆಸರಿನಲ್ಲಿತ್ತು. ಈ ವಿಶ್ವದಾಖಲೆಯನ್ನು ಮಿಚೆಲ್ ಮುರಿದಿದ್ದಾರೆ. ಸಾಕ್ಲೈನ್ ಮುಷ್ತಾಖ್ 150 ರನ್ ಗಳಿಸಿಲು 78 ಏಕದಿನ ಪಂದ್ಯಗಳನ್ನಾಡಿದ್ದರು. ಮಿಚೆಲ್ 77 ಪಂದ್ಯಗಳಲ್ಲಿಯೇ 150 ವಿಕೆಟ್ ಕಬಳಿಸಲು ಯಶಸ್ವಿಯಾಗಿದ್ದಾರೆ.