ಸ್ಪೀಕರ್ ಕೆಲಸ ತೃಪ್ತಿ ತಂದಿದೆ: ಖಾತೆ ಬಗ್ಗೆ ನಿರೀಕ್ಷೆಯಿಲ್ಲ- ಸಚಿವ ಯು.ಟಿ ಖಾದರ್

ಬೆಂಗಳೂರು,ಜೂನ್,4,2026 (www.justkannada.in): ವಿಧಾನಸಭೆ ಸ್ಪೀಕರ್ ಆಗಿ ಕೆಲಸ ಮಾಡಿದ್ದು ನನಗೆ ತೃಪ್ತಿ ತಂದಿದೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ನಿನ್ನೆ ಸಿಎಂ ಆಗಿ ಡಿಕೆ ಶಿವಕುಮಾರ್ ಸಚಿವರಾಗಿ 13 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಂಜೆ ವೇಳೆಗೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ಈ ಹಿಂದೆ ಆರೋಗ್ಯ ಸಚಿವನಾಗಿ ಒಳ್ಳೆಯ  ಕೆಲಸ ಮಾಡಿದ್ದೇನೆ . ನಾನು ಖಾತೆ ನಿರೀಕ್ಷೆಯಲ್ಲಿಲ್ಲ. ಎಲ್ಲವೂ ಮಹತ್ವದ ಖಾತೆಗಳೇ.  ಖಾತೆ ಯಾವುದು ಅನ್ನೋದು ಮುಖ್ಯ ಅಲ್ಲ,  ಕೆಲಸ ಮುಖ್ಯ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ತಿಳಿಸಿದರು.

Key words: satisfied, work, Speaker, Minister, U.T. Khader