Saturday, September 5, 2026

BDA Apartments

Home Front Page ಕಂದಾಯ ಇಲಾಖೆಯನ್ನೇ ಕೊಡಲು ಮನವಿ ಮಾಡಿದ್ದೇನೆ- ಸಚಿವ ಕೃಷ್ಣಭೈರೇಗೌಡ

ಕಂದಾಯ ಇಲಾಖೆಯನ್ನೇ ಕೊಡಲು ಮನವಿ ಮಾಡಿದ್ದೇನೆ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜೂನ್,4,2026 (www.justkannada.in):  ನನಗೆ ಈ ಹಿಂದೆ ನೀಡಲಾಗಿದ್ದ ಕಂದಾಯ ಇಲಾಖೆಯನ್ನೇ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ನನಗೆ ಸಚಿವ ಸ್ಥಾನ ನೀಡಿದಕ್ಕೆ  ಹೈಕಮಾಂಡ್ ಗೆ ಧನ್ಯವಾದ ಹೇಳುತ್ತೇನೆ.  ಕಂದಾಯ ಇಲಾಖೆಯಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಕಂದಾಯ ಇಲಾಖೆ ಕೊಟ್ಟರೇ ಅವುಗಳನ್ನು ಪೂರ್ಣಗೊಳಿಸುವ ಗುರಿ ಇದೆ ಎಂದರು.

ಜಮೀರ್ ಅಹ್ಮದ್ ಖಾನ್ ಆಡಿಯೋ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಕಾಂಗ್ರೆಸ್ ಅಭ್ಯರ್ಥಿಯನ್ನೇ ಸೋಲಿಸುವ ಮಾತನಾಡಿದ್ದು ಗಂಭೀರ ವಿಚಾರ. ಪಕ್ಷದ ಮುಖ್ಯವಾಹಿನಿ ಇದ್ದವರೇ ಹೀಗೆ ಹೇಳಿದ್ದು ತಪ್ಪು. ಸಚಿವ ಸ್ಥಾನ ತಪ್ಪಿರಬಹುದು.  ಆಡಿಯೋ ಸತ್ಯಾಸತ್ಯತೆ ಬಂದ ಮೇಲೆ ಕ್ಲಿಯರ್ ಆಗುತ್ತೆ ಎಂದರು.

Key words:  requested, Revenue Department, Minister, Krishna Bhairegowda