Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಮೈಸೂರು ಅರಮನೆ ಮತ್ತು ಚಾಮುಂಡಿ ಬೆಟ್ಟ ದೇವಾಲಯ ಪುನಾರಂಭ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು...

ಮೈಸೂರು ಅರಮನೆ ಮತ್ತು ಚಾಮುಂಡಿ ಬೆಟ್ಟ ದೇವಾಲಯ ಪುನಾರಂಭ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಮೇ,30,2020(www.justkannada.in): ಮೈಸೂರು ಅರಮನೆ ಪುನರಾರಂಭದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಾಮುಂಡಿಬೆಟ್ಟ ದೇವಾಲಯ ಪುನರಾರಂಭಕ್ಕೂ ಕೇಂದ್ರದ ಆದೇಶ ಬರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ S.T.ಸೋಮಶೇಖರ್ ಹೇಳಿದರು.

ಪ್ರವಾಸಿ ತಾಣಗಳ ಪುನಾರಂಭದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರವಾಸಿ ತಾಣಗಳನ್ನ ಮತ್ತೆ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಇಂದು ಅಥವ ನಾಳೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಎಲ್ಲಾ ಸ್ಥಳಗಳನ್ನ ಪುನರಾರಂಭ ಮಾಡಿದ್ರೆ ಮತ್ತೆ ಮುಚ್ಚುವುದಿಲ್ಲ. ಮೈಸೂರು ಜಿಲ್ಲಾಡಳಿತ ಎಲ್ಲದಕ್ಕೂ ಸಜ್ಜಾಗಿದೆ ಎಂದು ಹೇಳಿದರು.

Key words: Minister -ST Somashekhar — reopening – Mysore Palace – Chamundi Hill- Temple