Thursday, September 24, 2026

BDA Apartments

Home Front Page ನೀಟ್ ನಲ್ಲಿ ಅಕ್ರಮ: ಪ್ರತಿ ಬಾರಿ ಪ್ರಶ್ನೆ ಮಾಡಿದ್ರೂ ಯಾವುದೇ ಸುಧಾರಣೆ ಇಲ್ಲ- ಸಚಿವ ಶರಣಪ್ರಕಾಶ್...

ನೀಟ್ ನಲ್ಲಿ ಅಕ್ರಮ: ಪ್ರತಿ ಬಾರಿ ಪ್ರಶ್ನೆ ಮಾಡಿದ್ರೂ ಯಾವುದೇ ಸುಧಾರಣೆ ಇಲ್ಲ- ಸಚಿವ ಶರಣಪ್ರಕಾಶ್ ಪಾಟೀಲ್

ಕಲಬುರುಗಿ,ಜೂನ್,24,2026 (www.justkannada.in): ಹಲವು ವರ್ಷಗಳಿಂದ ನೀಟ್ ನಲ್ಲಿ ಅಕ್ರಮ ನಡೆಯುತ್ತಿದೆ. ಪ್ರತಿಬಾರಿಯೂ ಈ ಬಗ್ಗೆ ಪ್ರಶ್ನೆ ಎತ್ತಿದರೂ ಯಾವುದೇ ಸುಧಾರಣೆ ಆಗುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸಮಾವೇಶದಿಂದ ನೀಟ್ ಅಭ್ಯರ್ಥಿಗಳಿಗೆ ತೊಂದರೆಯಾಯಿತು ಎಂಬ ಆರೋಪ ಕುರಿತು ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಬಿಜೆಪಿಯವರಿಗೆ ನಾಚಿಕೆಯಾಗಬೇಕು.  ಕಳೆದ ಹಲವು ವರ್ಷಗಳಿಂದ ನೀಟ್ ನಲ್ಲಿ ಅಕ್ರಮ ನಡೆಯುತ್ತಿದೆ ಪ್ರತಿ ಬಾರಿ ಪ್ರಶ್ನೆ ಎತ್ತಿದ್ದೇನೆ.  ಆದರೆ ಯಾವುದೇ ಸುಧಾರಣೆ ಆಗುತ್ತಿಲ್ಲ. 3 ವಿದ್ಯಾರ್ಥಿಗಳಿಗೆ  ಪರೀಕ್ಷೆ ಮಿಸ್ ಆಗಿದ್ದಕ್ಕೆ ಆರೋಪ ಮಾಡುತ್ತಾರೆ. ಪರೀಕ್ಷೆ ಏಕೆ ಮುಂದೂಡಿದ್ದರು ಅದಕ್ಕೆ ಮೊದಲು ಉತ್ತರ ಕೊಡಲಿ ಎಂದು ಹರಿಹಾಯ್ದರು.ನೀಟ್ ನಲ್ಲಿ ಅಕ್ರಮ: ಪ್ರತಿ ಬಾರಿ ಪ್ರಶ್ನೆ ಮಾಡಿದ್ರೂ ಯಾವುದೇ ಸುಧಾರಣೆ ಇಲ್ಲ- ...

ಸಚಿವ ಸಂಪುಟ ವಿಸ್ತರಣೆ ವಿಚಾರ ಆದಷ್ಟು ಶೀಘ್ರ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ.  ರಾಜ್ಯಸಭೆ ವಿಧಾನ ಪರಿಷತ್ ಚುನಾವಣೆಯಿಂದ ತಡವಾಗಿದೆ. ಆದಷ್ಟು ಬೇಗ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.ನೀಟ್ ನಲ್ಲಿ ಅಕ್ರಮ jk02_new jk02 new

Key words: NEET, BJP, Minister, Sharan Prakash Patil