Sunday, August 9, 2026

BDA Apartments

Home Front Page ಬಲಿತ ದಲಿತ ಹೇಳಿಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬಲಿತ ದಲಿತ ಹೇಳಿಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಜೂನ್,24,2026 (www.justkannada.in): ಪ್ರಿಯಾಂಕ್ ಖರ್ಗೆ ಬಲಿತ ದಲಿತ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಷ್ಟು ಜನ ಬಲಿತರು  ಇದ್ದಾರೆ ತೋರಿಸಲಿ. ಇವರ ಮನಸ್ಥಿತಿ ಮುಂಚೆಯಿಂದಲೂ ಹೀಗೇನೆ. ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು.  ಯಾಕೆ ನಾನು ಸೂಟು ಹಾಕಬಾರದಾ ಆರ್ ಎಸ್ ಎಸ್ ಬಗ್ಗೆ ಕೇಳಿದರೇ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ಆದಾಯ ಕೇಳಿದರೇ ಇವರಿಗೇಕೆ ಉರಿ. ಒಬ್ಬ ದಲಿತ ಆರ್ ಎಸ್ ಎಸ್ ಬಗ್ಗೆ ಕೇಳಲೇ ಬಾರದಾ ಎಂದು ಪ್ರಶ್ನಿಸಿದರು.

ಮೋಹನ್ ಭಾಗವತ್ ಬೆಂಗಳೂರಿಗೆ ಬರುತ್ತಿದ್ದಾರಂತೆ. ನೋಂದಣಿ ದಾಖಲೆ ತರ್ತಿದ್ದಾರೋ ಏನೋ ಗೊತ್ತಿಲ್ಲ. ನಾನು ಪ್ರಶ್ನೆ ಕೇಳದ್ದೇನೆ. ಅದಕ್ಕೆ ಮೊದಲು ಉತ್ತರ ಕೊಡಲಿ ನೋಂದಣಿ ದಾಖಲೆ ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.

Key words: Home Minister, Priyank Kharge, Union Minister, Shobha Karandlaje,