Thursday, September 24, 2026

BDA Apartments

Home Front Page ಸಚಿವ ಸತೀಶ್ ಜಾರಕಿಹೊಳಿ ಅವರ ಬಾವನ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ

ಸಚಿವ ಸತೀಶ್ ಜಾರಕಿಹೊಳಿ ಅವರ ಬಾವನ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ

ಬೆಳಗಾವಿ, ಜೂನ್,24,2026 (www.justkannada.in): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ (ಭಾವ) ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್  ಅವರಿಗೆ  ಇಡಿ ಶಾಕ್ ನೀಡಿದೆ.

ಬೇನಾಮಿ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವೈ. ಮಂಜುನಾಥ್   ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.  ಇಂದು ಏಕಕಾಲದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ದಾಳಿಯಾಗಿದೆ ಎನ್ನಲಾಗಿದೆ.ಸಚಿವ ಸತೀಶ್ ಜಾರಕಿಹೊಳಿ ಅವರ ಬಾವನ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ ED

ವೈ. ಮಂಜುನಾಥ್ ವಿರುದ್ಧ ಲಂಚದ ಹಣದ ಅಕ್ರಮ ಹೂಡಿಕೆ ಹಾಗೂ ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಗಂಭೀರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ  ಇಡಿ ಅಧಿಕಾರಿಗಳ ತಂಡಗಳು ಎರಡು ಕಾರುಗಳಲ್ಲಿ ಮುಂಜಾನೆಯೇ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಸಚಿವ ಸತೀಶ್ ಜಾರಕಿಹೊಳಿ ಅವರ ಬಾವನ ಮನೆ ಮೇಲೆ ಇಡಿ ದಾಳಿ jk02_new jk02 new

Key words: ED, raids, Minister, Satish Jarkiholi’s , Relation, house