ಗದಗ, ಅಕ್ಟೋಬರ್,19,2026 (www.justkannada.in): ಸ್ಟಿಂಗ್ ವಿಚಾರವಾಗಿ ನನಗೆ ಎಬಿಸಿಡಿ ಗೊತ್ತಿಲ್ಲ. ಸ್ಟಿಂಗ್ ವಿಚಾರದಿಂದ ದೂರ ಇರಲು ಬಯಸುವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ ವರದಿ ಬರಲಿ. ವರದಿ ಬಳಿಕ ಸರ್ಕಾರ ಸಾರ್ವಜನಿಕವಾಗಿ ತಿಳಿಸುತ್ತದೆ ಎಂದರು.
ಕಬ್ಬು ಬೆಳೆಗಾರರ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಈ ಬಗ್ಗೆ ಬಾಲ್ ಬ್ಯಾಟ್ ಕೇಂದ್ರ ಸರ್ಕಾರದ ಕಡೆ ಇದೆ. ಕಬ್ಬು ಬೆಳೆ ದರ ಹೆಚ್ಚಿಸಿದ್ರೆ ಕಾರ್ಖಾಗಳಿಗೂ ಅನುಕೂಲ. 7 ವರ್ಷದಿಂದ ಸಕ್ಕರೆ ದರ ಹೆಚ್ಚಾಗಿಲ್ಲ ಅಸಮತೋಲನವಿದೆ ಈ ಸಮಸ್ಯೆ ಬಗೆಹರಿಸುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಬೇಗ ಸಮಸ್ಯೆ ಬಗೆಹರಿಸಿದರೇ ಹೋರಾಟ ಅಂತ್ಯವಾಗುತ್ತದೆ ಎಂದು ತಿಳಿಸಿದರು.






