ಶಿವಮೊಗ್ಗ,ಅಕ್ಟೋಬರ್,19,2026 (www.justkannada.in): ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಅಕ್ಟೋಬರ್ 17ರ ರಾತ್ರಿ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 17ರ ರಾತ್ರಿ 8:49ಕ್ಕೆ 7019994981 ಸಂಖ್ಯೆಯಿಂದ ರಿಜ್ವಾನ್ ಬೇಗ್ ಎಂಬಾತ ಹಾಗೂ ರಾತ್ರಿ 10:49ಕ್ಕೆ 9823658527 ಸಂಖ್ಯೆಯಿಂದ ಫರಾನ್ ರಶೀದ್ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ‘ಟ್ರಾಯ್’ (TRAI) ತಂತ್ರಾಂಶದ ಮೂಲಕ ಇವರ ಹೆಸರುಗಳು ಪತ್ತೆಯಾಗಿವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
Key words: threat call, former Minister, K.S. Eshwarappa, Complaint, SP






