ಬೆಂಗಳೂರು,ಅಕ್ಟೋಬರ್,19,2026 (www.justkannada.in): ಸ್ಟಿಂಗ್ ಆಪರೇಷನ್ ವಿಚಾರ, ರಾಜ್ಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಸಾರ್ವಜನಿಕವಾಗಿ ಚರ್ಚಿಸುವುದು ಒಳ್ಳೆಯದಲ್ಲ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ. 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಸಾರ್ವಜನಿಕ ಜೀವನದಲ್ಲಿ ಆನೇಕ ತಪ್ಪುಗಳು ಆಗಬಹುದು ಈ ಹಿಂದೆ ಕೂಡ ಬೇಕಾದಷ್ಟು ಇಂತಹದೆಲ್ಲಾ ನಡೆದು ಹೋಗಿದೆ. ಆದರೆ ಈ ಹಂತಕ್ಕೆ ಯಾವತ್ತೂ ಕೂಡ ಮುಟ್ಟಿಲ್ಲ. ಹೆಚ್ ಡಿಕೆ ಕೇಂದ್ರದ ಸಚಿವರಾಗಿದ್ದಾರೆ. ಅವರು ಯೋಚನೆ ಮಾಡಬೇಕು ಹೆಚ್ ಡಿಕೆ ತಮ್ಮ ವ್ಯಕ್ತಿತ್ವ ಸ್ಥಾನಮಾನ ಕುರಿತು ಅದರ ಇಂಪ್ಯಾಕ್ಟ್ ಬಗ್ಗೆಯೂ ಅವರು ಯೋಚನೆ ಮಾಡಿಕೊಳ್ಳಬೇಕು. ಇವೆಲ್ಲವೂ ಒಂದು ರೀತಿ ಅಸಹ್ಯ ಅನ್ನೋ ರೀತಿ ನಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ಕೊಡ್ತಿದ್ದರೆ ಎಲ್ಲಿಗೆ ತಲುಪುತ್ತೆ ಅದಕ್ಕಾಗಿ ಹೆಚ್ಚು ಇದನ್ನು ಸಾರ್ವಜನಿಕವಾಗಿ ಚರ್ಚಿಸುವುದು ಒಳ್ಳೆಯದಲ್ಲ ಎಂದರು.
ಸರ್ಕಾರದ ಇಮೇಜ್ ಅನ್ನು ಯಾವ ರೀತಿ ನಾವು ಪ್ರೊಟೆಕ್ಟ್ ಮಾಡಬೇಕು. ಜನರಿಗೆ ಸತ್ಯಾಂಶ ಹೇಳಬೇಕು ಅದನ್ನು ನಾವು ಮಾಡಲೇಬೇಕು ಕಾನೂನಿನಡಿ ಏನು ಮಾಡಬೇಕು ಅದನ್ನ ಗೃಹ ಸಚಿವರು ಮಾಡುತ್ತಾರೆ ಸಿಎಂ ಡಿಕೆ ಶಿವಕುಮಾರ್ ಕೂಡ ಈಗಾಗಲೇ ಹೇಳಿದ್ದಾರೆ. ಎಲ್ಲಾ ಚರ್ಚಸಿ ಸರ್ಕಾರವಾಗಿ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ ಎಂದರು.
sting operation, not, positive development, DCM, Parameshwara






