ಬೆಂಗಳೂರು, ಅಕ್ಟೋಬರ್,19,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಲೈಟಿಂಗ್ಸ್ ಅನ್ನು 10 ದಿನಗಳವರೆಗೆ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಸಿಎಂ ಡಿಕೆ ಶಿವಕುಮಾರ್, ನಾಳೆ ಹಬ್ಬ ಇದೆ. ಎಲ್ಲಾ ಕಡೆ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದೇವೆ. ಯುವ ದಸರಾ ಕಂಬಳಕ್ಕೆ ನಾನು ಹೋಗಿದ್ದೆ. ಲೈಟಿಂಗ್ಸ್ ನೋಡಲು ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದಾರೆ. ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ. ಅದರ ಬಗ್ಗೆ ಘೋಷಣೆ ಮಾಡುತ್ತೇವೆ ಎಂದರು.
ದಸರಾ ಬಗ್ಗೆ ರೀಲ್ಸ್ ಮಾಡಿ ಹಾಕಿದರೇ ಪ್ರಶಸ್ತಿ ಕೊಡುತ್ತೇವೆ. ನೂರು ಬೆಸ್ಟ್ ರೀಲ್ಸ್ ಗಳಿಗೆ ಬಹುಮಾನ ಕೊಡಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.






