ನಾಗ್ಪುರ, ಅಕ್ಟೋಬರ್ 20,2026 (www.justkannada.in): ಬಾಂಗ್ಲಾದೇಶ, ನೇಪಾಳ ಹಾಗೂ ಯುರೋಪ್ ನ ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ‘ಆಡಳಿತ ಬದಲಾವಣೆ ಮಾಡಲು ಹುನ್ನಾರ. ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ. ಆದರೆ ಭಾರತದಲ್ಲಿ ಇಂತಹ ಅರಾಜಕತೆಯ ಪ್ರಯತ್ನಗಳು ಎಂದಿಗೂ ಸಫಲವಾಗಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ.
ಇಂದು ನಾಗ್ಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಮೋಹನ್ ಭಾಗವತ್ , ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಬೀದಿಗಿಳಿದು ಆಡಳಿತ ಬದಲಿಸಿದ ಘಟನೆಗಳನ್ನು ನಾವು ನೋಡಿದ್ದೇವೆ. ಭಾರತದಲ್ಲೂ ಅದೇ ರೀತಿಯ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಾ ಇದೆ. ಆದರೆ, ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ. ಭಾರತವು ದೃಢ ಸಂಕಲ್ಪದೊಂದಿಗೆ ಸಾಗುತ್ತಿದೆ ಮತ್ತು ನಮ್ಮ ಸಮಾಜದ ಸಾಮೂಹಿಕ ಚೈತನ್ಯ ಹಾಗೂ ಪುರುಷಾರ್ಥ ಇಂದು ಜಾಗೃತಗೊಂಡಿದೆ” ಎಂದು ತಿಳಿಸಿದರು.
ಕೇವಲ ಮತಬ್ಯಾಂಕ್ ರಾಜಕಾರಣ ಅಥವಾ ಅಗ್ಗದ ಜನಪ್ರಿಯತೆಗಾಗಿ ಚಳವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಬೀದಿಗಿಳಿದು ಮಾಡುವ ಪ್ರತಿಭಟನೆಗಳಿಂದ ಮಾತ್ರ ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ; ಸಮಾಜದ ನಡುವಿನ ಸಕಾರಾತ್ಮಕ ಸಂವಾದ ಮತ್ತು ಪರಸ್ಪರ ಚರ್ಚೆಯಿಂದ ಮಾತ್ರ ನಿಜವಾದ ಪರಿಹಾರ ಹೊರಹೊಮ್ಮಲು ಸಾಧ್ಯ ಎಂದು ಮೋಹನ್ ಭಾಗವತ್ ತಿಳಿಸಿದರು.
Systematic conspiracy, change, regime, country, Bangladesh, France, Mohan Bhagwat







