ಬೆಂಗಳೂರು, ಅಕ್ಟೋಬರ್,20,2026 (www.justkannada.in): ಸ್ಟಿಂಗ್ ಅಪರೇಷನ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಬಿಐಗೆ ಪ್ರಕರಣದ ತನಿಖೆ ವಹಿಸಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ ಸಿಬಿಐಗೆ ಕೊಡಿ. ಸ್ಟಿಂಗ್ ಆಪರೇಷನ್ ಮುಚ್ಚಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾರೇ ಭಾಗಿಯಾದರೂ ಅವರ ವಿರುದ್ದ ಕ್ರಮ ಆಗಬೇಕು. ಸ್ಟಿಂಗ್ ವಿಷಯದಲ್ಲಿ ಗೃಹ ಸಚಿವರು ಮಾತಾಡಿದರೆ ಸರಿಯಲ್ಲ. ಗೃಹ ಖಾತೆ ವಹಿಸಿಕೊಂಡವರು ಬಹಳ ನಿಷ್ಪಕ್ಷಪಾತವಾಗಿ ಇರಬೇಕು ಹೆಚ್ ಡಿಕೆ ಒಂದು ವಿಷಯವನ್ನು ಹೊರ ತಂದರು. ಅದರ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಕೊಳ್ಳುತ್ತೇವೆ ಎಂದು ಹೇಳಿದ್ರಾ? ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಅನ್ ಫಿಟ್ ಹೋಮ್ ಮಿನಿಸ್ಟರ್. ಹೆಚ್ ಡಿಕೆ ಸ್ಟಿಂಗ್ ಅಪರೇಷನ್ ಹೊರಗಡೆ ತಂದಿದ್ದಾರೆ. ಎಸ್ ಐಆರ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ವೋಟ್ ಚೋರಿ ಎಲ್ಲಿ ಆಗಿದೆ ಅಂತಾ ಕೇಳಿದರೆ ಉತ್ತರ ಕೊಡಿ ಅಂತಾರೆ. ಗೃಹ ಸಚಿವರ ಅವಿವೇಕತನಕ್ಕೆ ಏನು ಹೇಳಬೇಕು? ಹೋಮ್ ಮಿನಿಸ್ಟರ್ ಆಗಿ ಏನು ಮಾಡಬೇಕೆಂದು ಇನ್ನೂ ಓದಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
Key wods: sting operation, Hand over, CBI, Chalavadi Narayanaswamy







