Tuesday, October 20, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಮೈಸೂರು,ಅಕ್ಟೋಬರ್,20,2026(www.justkannada.in): ನಾಡಿನೆಲ್ಲಡೆ ದಸರಾ, ಆಯುಧ ಪೂಜೆ ಸಂಭ್ರಮವಾಗಿದ್ದು ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಕಳೆಗಟ್ಟಿದೆ. ಮೈಸೂರಿನ ಅರಮನೆಯಲ್ಲಿ ಇಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಆರಂಭವಾಗಿವೆ.

ಇಂದು ಸಾಂಪ್ರದಾಯಿಕವಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಸಲ್ಲಿಕೆ ಮಾಡಿದರು.  ಮೊದಲು ಅರಮನೆಯ ಆನೆ ಬಾಗಿಲಿನ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಸ್ವಚ್ಛಗೊಳಿಸಲಾಯಿತು.ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಬಳಿಕ, ಅಲ್ಲಿಂದ ವಾಪಸ್​ ಅರಮನೆಯಲ್ಲಿನ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತಂದು ಅವುಗಳ ಜೋಡಿಸಲಾಯಿತು. ನಂತರ ಮಹಾರಾಜ ಯದುವೀರ್​ ಒಡೆಯರ್​ ಅವರಿಂದ ಪೂಜೆ ಸಲ್ಲಿಸಲಾಗುತ್ತಿದೆ. ಇದೇ ವೇಳೆ, ಪಟ್ಟದ ಆನೆ, ಕುದುರೆ, ಹಸು, ಪಲ್ಲಕ್ಕಿಗೂ ಪೂಜೆ ಜರುಗಲಿದೆ. ಬಳಿಕ ಅರಮನೆಯಲ್ಲಿ ಎಲ್ಲ ವಾಹನಗಳಿಗೆ ಆಯುಧ ಪೂಜೆ ಸಲ್ಲಲಿದೆ.ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್ ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಆಯುಧೆ ಪೂಜೆಯಲ್ಲಿ ಯದುವೀರ್ ಅವರ ಪತ್ನಿ ತ್ರಿಷಿಕಾ ದೇವಿ ಹಾಗೂ  ಇಬ್ಬರು ಪುತ್ರರು  ಆಯುಧಾ ಪೂಜಾ ಕೈಂಕರ್ಯ ವೀಕ್ಷಣೆ ಮಾಡಿದರು. ರಾಜವಂಶಸ್ಥೆ ಪ್ರಮೋದಾದೇವಿ ಅವರು ಸಹ  ಭಾಗಿಯಾಗಿದ್ದರು.Mysore Palace jk02_new jk02 new

 

English Summary
Title

Ayudha Puja 2026: Yaduveer Wadiyar Leads Royal Rituals at Mysuru Palace

Short Description
Ayudha Puja 2026 is being celebrated with grand traditional fervor at the Mysuru Palace. The titular head of the Wadiyar dynasty, Yaduveer Krishnadatta Chamaraja Wadiyar, led the centuries-old royal rituals. The majestic celebrations commenced with the sacred Chandi Homa, followed by the ceremonial worship of the 'Khasa Ayudhas' (royal weapons) during the auspicious morning muhurat. Traditional prayers were also offered to the Pattada Aane (royal elephant), royal horses, and the heritage car fleet at the Savari Thotti. These exclusive rituals mark the grand finale of the world-famous Mysuru Dasara festival, ahead of tomorrow's spectacular Vijayadashami Jamboo Savari.
Keywords
Ayudha Puja, celebrations, Mysore Palace, Yaduveer, rituals