Wednesday, October 21, 2026

Dasara Wishes

ಮೈಸೂರು ದಸರಾ: ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ DasraWishes_JK DasraWishes JK
Happy Dasara
Home Front Page ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾಗಿರುವ ‘ವಜ್ರಮುಷ್ಟಿ ಕಾಳಗ’ ಈ ಬಾರಿ ರದ್ದಾಯಿತು.

ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಯಿತು.  ಪರಂಪರಾಗತವಾಗಿ ಈ ಕಾಳಗ ನಡೆದುಕೊಂಡು ಬಂದಿದ್ದು, ಸಾಂಪ್ರದಾಯಿಕವಾಗಿ ಅರಮನೆಯಿಂದ ಯದುವೀರ ಒಡೆಯರ್​ ವಿಜಯಯಾತ್ರೆ ಹೊರಡುವ ಮುನ್ನ ಅಂಬಾ ವಿಲಾಸ ಅರಮನೆ ಆವರಣದ  ಕಲ್ಯಾಣ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಟಿ ಕಾಳಗ ಸಂಪ್ರದಾಯದಂತೆ ನಡೆಯಬೇಕಿತ್ತು. ಆದರೆ, ಸಮನ್ವಯದ ಕೊರತೆಯಿಂದ ರದ್ದಾಗಿದೆ.ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಈ ನಡುವೆ ರಾಜ ಮನೆತನದ ಮನವೊಲಿಕೆಗೆ ಯತ್ನಸಲಾದರೂ ಸಹ ಸಫಲವಾಗಲಿಲ್ಲ ಎನ್ನಲಾಗಿದೆ. ಕಾಳಗ ರದ್ದಾಗಲು ಪೊಲೀಸರ ಅಡಚಣೆ ಕಾರಣ. ಸಕಾಲಕ್ಕೆ ಪ್ರವೇಶ ಕಲ್ಪಿಸಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದಿತ್ತು ಎಂದು ಪೊಲೀಸರ ವರ್ತನೆಗೆ ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದರು.Mysuru Dasara jk02_new jk02 new

 

English Summary
Title

Mysuru Dasara History: Vajramushti Kalaga Cancelled for First Time

Short Description
For the first time in the history of the world-famous Mysuru Dasara, the traditional Vajramushti Kalaga was cancelled on October 21, 2026. Scheduled for Vijayadashami at the Amba Vilas Palace, the historic knuckle-duster wrestling match was called off due to a lack of coordination and a heated dispute with security personnel, who barred the professional wrestlers (Jattis) from entering. Dating back to 1131 AD and patronized by the Vijayanagara Empire and Wadiyar dynasty, this centuries-old ritualistic fight traditionally ends when the first drop of blood is drawn. Its sudden cancellation shocked cultural enthusiasts.
Keywords
Mysuru Dasara, first time, history, ‘Vajramushti Kalaga, cancelled