Friday, September 25, 2026

BDA Apartments

Home Front Page 2028ಕ್ಕೆ ಡಿಕೆಶಿ ಸಿಎಂ ಆಗಲಿ: ನಾನು ಇನ್ನೂ ಕಾಯುತ್ತೇನೆ- ಸಚಿವ ಸತೀಶ್‌ ಜಾರಕಿಹೊಳಿ

2028ಕ್ಕೆ ಡಿಕೆಶಿ ಸಿಎಂ ಆಗಲಿ: ನಾನು ಇನ್ನೂ ಕಾಯುತ್ತೇನೆ- ಸಚಿವ ಸತೀಶ್‌ ಜಾರಕಿಹೊಳಿ

ಮೈಸೂರು,ಸೆಪ್ಟಂಬರ್‌,25,2026 (www.justkannada.in): 2028ಕ್ಕೆ ಡಿ.ಕೆ ಶಿವಕುಮಾರ್‌ ಮತ್ತೆ ಮುಖ್ಯಮಂತ್ರಿಯಾಗಲಿ. ನನಗೂ ಇನ್ನೂ ವಯಸ್ಸಿದೆ.  ನಾನು ಇನ್ನೂ ಕಾಯುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ,  2028ಕ್ಕೆ ಡಿಕೆಶಿ ಸಿಎಂ ಆಗಲಿ  ಡಿಕೆ ಶಿವಕುಮಾರ್ ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ. ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದಿದ್ದೆ.  ಡಿಕೆ ಶಿವಕುಮಾರ್ ಅವರು ಮುಂದೆಯೂ ನಾನೇ ಸಿಎಂ‌ ಅಂತಿದ್ದಾರೆ.  ಸಂತೋಷ ನನಗೆ ಅವರೇ ಸಿಎಂ ಆಗಲಿ ನಾವು ಕಾಯುತ್ತೇವೆ ಎಂದರು.DK Shivakumar

ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದಿಲ್ಲ. ಬಜೆಟ್‌ ನಲ್ಲಿ ನಾವು ಏನು ಘೋಷಣೆ ಮಾಡಿದ್ದೇವೋ ಅಷ್ಟೆಕ್ಕೆ ಮಾತ್ರ ನಮ್ಮ ಬಳಿ ಹಣವಿದೆ ಎಂದು ಇಲಾಖೆ ಹೇಳಿದೆ.  ಹೊಸ ಘೋಷಣೆಗೆ ಹಣ ಹೊಂದಿಸುವುದು ಕಷ್ಟ ಅಂದಿದೆ. ಇದನ್ನೂ ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.DK Shivakumar jk02

Key words: DK Shivakumar, become, CM, 2028, Minister, Satish Jarkiholi

English Summary
Title

Will DK Shivakumar Continue as Karnataka CM After 2028? Satish Jarkiholi Eyes the Chief Minister Post

Short Description
Following a major leadership shift, DK Shivakumar took office as the Chief Minister of Karnataka, succeeding Siddaramaiah. While Shivakumar intends to lead the Congress party into the 2028 Karnataka Assembly elections to secure another term, internal competition is already brewing. Public Works Minister Satish Jarkiholi has openly declared his own aspirations for the CM post in 2028. Jarkiholi has clarified that while he currently supports Shivakumar's leadership, the final decision regarding the 2028 Chief Minister face will ultimately rest with the Congress High Command and the Congress Legislature Party (CLP).
Keywords
DK Shivakumar, become, CM, 2028, Minister, Satish Jarkiholi