ಮಳೆ ನೆರೆ ಹಾನಿ ಬಗ್ಗೆ ವಿವರ ನೀಡಿದ ಸಚಿವ ಆರ್.ಅಶೋಕ್ : ಕೇಂದ್ರಕ್ಕೆ ವರದಿ ನೀಡಿ ನೆರವಿಗೆ ಮನವಿ ಬಗ್ಗೆ ಭರವಸೆ.

ಬೆಂಗಳೂರು,ಜುಲೈ,25,2021(www.justkannada.in):  ರಾಜ್ಯದಲ್ಲಿ  ಭಾರಿ ಮಳೆಯಿಂದಾಗಿ ಪ್ರವಾಹ  ಸ್ಥಿತಿ ನಿರ್ಮಾಣವಾಗಿದ್ದು, ಉತ್ತರ ಕನ್ನಡ, ಬೆಳಗಾವಿ, ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಅನಾಹುತಗಳು ಸಂಭವಿಸಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.jk

ಮಾಧ್ಯಮಗಳ ಜತೆ ಮಾತನಾಡಿ ಮಳೆ ನೆರೆ ಹಾನಿ ಬಗ್ಗೆ ವಿವರ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು 7 ಎನ್.ಡಿ.ಆರ್.ಎಫ್. ತಂಡ ನಿಯೋಜಿಸಲಾಗಿದೆ. 15 ಎಸ್.ಡಿ.ಆರ್.ಎಫ್. ನಿಯೋಜಿಸಲಾಗಿದೆ. ಭಾರಿ ಮಳೆಯಿಂದಾಗಿ 73 ರಾಷ್ಟ್ರೀಯ ಹೆದ್ದಾರಿಗಳು ಕುಸಿದಿವೆ. 16 ಸ್ಥಳಗಳಲ್ಲಿ ಭೂ ಕುಸಿತವುಂತಾಗಿದೆ. 134 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು  ಎಂದು ತಿಳಿಸಿದರು.

ಕರಾವಳಿ ಭಾಗದಲ್ಲಿ ಇನ್ನೂ 3 ದಿನ ಭಾರಿ ಮಳೆಯಾಗಲಿದೆ. ಪ್ರವಾಹದಲ್ಲಿ ಸಿಲುಕಿದ್ದ 153 ಜನರನ್ನು ರಕ್ಷಿಸಲಾಗಿದ್ದು, ಒಟ್ಟು 31,360 ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡದಲ್ಲಿ ರಾಜ್ಯದಲ್ಲಿ 9 ಜನರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. 24417 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ಮಳೆ ನೆರೆ ಹಾನಿ ಬಗ್ಗೆ ಕೇಂದ್ರಕ್ಕೆ ವರದಿ ನೀಡ ನೆರವಿಗೆ ಮನವಿ ಮಾಡಲಾಗುವುದು. ಇನ್ನು ಮಳೆ ಹಾನಿ ನಷ್ಟವನ್ನ ಅಂದಾಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: Minister -R. Ashok – details -rain –flood-damage