Wednesday, September 30, 2026

BDA Apartments

Home Front Page ಮೈಸೂರು ದಸರಾ: ಸ್ಟ್ರೀಟ್ ಫೆಸ್ಟಿವಲ್ ಆಯೋಜನೆಗೆ ಮುಂದಾದ ಜಿಲ್ಲಾಡಳಿತ.

ಮೈಸೂರು ದಸರಾ: ಸ್ಟ್ರೀಟ್ ಫೆಸ್ಟಿವಲ್ ಆಯೋಜನೆಗೆ ಮುಂದಾದ ಜಿಲ್ಲಾಡಳಿತ.

ಮೈಸೂರು,ಅಕ್ಟೋಬರ್,9,2023(www.justkannada.in): ಮೈಸೂರು ದಸರಾ ಮಹೋತ್ಸವ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು, ದಸರಾ ವೇಳೆ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆಗೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಮೈಸೂರು ಬ್ರಾಂಡ್ ಹೆಸರಿನಲ್ಲಿ ಸ್ಟ್ರೀಟ್ ಫೆಸ್ಟಿವಲ್ ನಡೆಸಲು  ಮೈಸೂರು ಜಿಲ್ಲಾಡಳಿತ ಪ್ಲಾನ್ ಮಾಡುತ್ತಿದೆ. ಈ ಹಿಂದೆ ನಡೆಸಲಾಗಿದ್ದ ಸ್ಟ್ರೀಟ್ ಫೆಸ್ಟಿವಲ್ ವಿವಾದಕ್ಕೀಡಾಗಿತ್ತು. ಈ ಹಿಂದೆ ನಡೆದ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಯುವತಿಯರ ಜೊತೆ ಪುಂಡರು ಅಸಭ್ಯವಾಗಿ ವರ್ತಿಸಿದ್ರು. ಇದಾದ ಬಳಿಕ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಕೋಕ್ ನೀಡಲಾಗಿತ್ತು. ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮಲ್ಲಿ ಬೇಡ ಎಂಬ ವಿರೋಧ ಸಹ ವ್ಯಕ್ತವಾಗಿತ್ತು. ಸಾಂಪ್ರದಾಯಿಕ ದಸರಾ ನಡೆಸಿ ಎಂಬ ಕೂಗು ಎದ್ದಿತ್ತು.ಮೈಸೂರು ದಸರಾ: ಸ್ಟ್ರೀಟ್ ಫೆಸ್ಟಿವಲ್ ಆಯೋಜನೆಗೆ ಮುಂದಾದ ಜಿಲ್ಲಾಡಳಿತ street festival-...

ಇದೀಗ ಅಕ್ಟೋಬರ್ 22 ರಂದು ಮತ್ತೊಮ್ಮೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಕ್ಟೋಬರ್ 22 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದ್ದು, ತಾನೇ ಬಹಿಷ್ಕರಿಸಿದ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುತ್ತಾ ಜಿಲ್ಲಾಡಳಿತ ಕಾದು ನೋಡಬೇಕಿದೆ.

Key words: Mysore Dasara -District administration – street festival- planning.