ರಾಜ್ಯದ ಎರಡು ಕಡೆ ಆರ್ & ಡಿ ಕೇಂದ್ರ ತೆರೆಯಲು ಆಪ್ಟೀವ್ ಕಂಪನಿಗೆ ಸಚಿವ ಎಂ ಬಿ ಪಾಟೀಲ್  ಆಹ್ವಾನ

ಬೋಸ್ಟನ್,ಸೆಪ್ಟಂಬರ್,28,2023(www.justkannada.in):  ಆಟೋಮೋಟೀವ್ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಆಪ್ಟೀವ್ ಪಿಎಲ್ಸಿ ರಾಜ್ಯದ ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್  ಆಹ್ವಾನ ನೀಡಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಸಚಿವ ಎಂ.ಬಿ ಪಾಟೀಲ್ ನೇತೃತ್ವದ ನಿಯೋಗವು ಬುಧವಾರ ಈ ಸಂಬಂಧ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ.

ಈ ಸಂಬಂಧ ಮಾಹಿತಿ ನೀಡಿರುವ ಸಚಿವ ಎಂ.ಬಿ ಪಾಟೀಲ್, ಆಪ್ಟೀವ್ ಕಂಪನಿ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ಸ್ಥಳೀಯ ಪೂರೈಕೆ ಜಾಲವನ್ನು ಅಭಿವೃದ್ಧಿ ಪಡಿಸಲು ಇರುವ ಅವಕಾಶದ ಬಗ್ಗೆ ಚರ್ಚಿಸಲಾಗಿದೆ. ಇದರ ಜೊತೆಗೆ ಆಪ್ಟೀವ್ ಕಂಪನಿಯ ಉತ್ಪನ್ನಗಳ ಓಇಎಂ (ಒರಿಜನಲ್ ಎಕ್ವಿಪ್ಮೆಂಟ್ ಮ್ಯಾನಫ್ಯಾಕ್ಚರಿಂಗ್),  ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಪಿಎಂ) ಸೌಲಭ್ಯಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಲಾಯಿತು ಎಂದಿದ್ದಾರೆ.

ವಿದ್ಯುತ್ ಚಾಲಿತ ಮತ್ತು ಸಾಫ್ಟ್ವೇರ್ ನಿರ್ದೇಶಿತ ಸಾರಿಗೆ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಪ್ಟೀವ್ ಪಿಎಲ್ಸಿ ಕಂಪನಿಯು ಸದ್ಯಕ್ಕೆ ಬೆಂಗಳೂರಿನಲ್ಲಿ ತನ್ನ ತಾಂತ್ರಿಕ ಕೇಂದ್ರವನ್ನು ಹೊಂದಿದ್ದು, ಇದರಲ್ಲಿ 2,500 ಎಂಜಿನಿಯರುಗಳು ಮತ್ತು ತಂತ್ರಜ್ಞರು ಇದ್ದಾರೆ.

ರಾಜ್ಯದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಎಂಕೆಎಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯೊಂದಿಗೂ ಚರ್ಚಿಸಲಾಗಿದೆ. ಈ ಮಾತುಕತೆಯ ವೇಳೆಯಲ್ಲಿ ರಾಜ್ಯದಲ್ಲಿ ವ್ಯಾಕ್ಯೂಮ್ ಮತ್ತು ಫೋಟಾನಿಕ್ಸ್ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸುಧಾರಣೆಗೆ ಇರುವ ಅವಕಾಶಗಳನ್ನು ಗಮನಕ್ಕೆ ತರಲಾಗಿದೆ. ಅಲ್ಲದೆ, ರಾಜ್ಯದಲ್ಲಿರುವ ಕಾರ್ಪೊರೇಟ್ ತೆರಿಗೆ ದರ, ವೇತನ ಮತ್ತು ಬೌದ್ಧಿಕ ಹಕ್ಕುಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಹಾಗೆಯೇ, ಇಂಧನ ಕ್ಷೇತ್ರದ ಸಾಧನಗಳಲ್ಲಿ ಫ್ಲುವೋರಿನ್ ತಂತ್ರಜ್ಞಾನ ಬಳಕೆಗೆ ಹೆಸರಾಗಿರುವ ಓರ್ಬಿಯಾ ಕಂಪನಿಯ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಅವರಿಗೆ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಇರುವ ಅವಕಾಶ, ಇಥಲೈನ್ ಉತ್ಪಾದನೆ, ಹನಿ ನೀರಾವರಿಗೆ ಬೇಕಾದ ಪೈಪುಗಳ ತಯಾರಿಕೆ ಇತ್ಯಾದಿಗಳನ್ನು ಕುರಿತು ಮಾಹಿತಿ ನೀಡಿದ್ದೇವೆ ಎಂದು ಎಂ.ಬಿ ಪಾಟೀಲ್  ವಿವರಿಸಿದ್ದಾರೆ.

ಎಂ ಬಿ ಪಾಟೀಲ್ ನೇತೃತ್ವದ ನಿಯೋಗವು ಭಾರತದ ಆರ್ಥಿಕ ರಾಜಧಾನಿಯಾದ ಬೆಂಗಳೂರಿನಲ್ಲಿ ಆರ್ಥಿಕ ಸೇವೆಗಳ ಬೆಳವಣಿಗೆಗೆ ಇರುವ ಅವಕಾಶಗಳ ಬಗ್ಗೆ ಸ್ಟೇಟ್ ಸ್ಟ್ರೀಟ್ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ.

ಮಾತುಕತೆಯ ಸಂದರ್ಭದಲ್ಲಿ ಆಪ್ಟೀವ್ ಕಂಪನಿಯ ಉನ್ನತಾಧಿಕಾರಿ ಕೆವಿನ್ ಕ್ಲೈನ್, ಎಂಕೆಎಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಸಿಇಒ ಟಿ ಸಿ ಜಾನ್ ಲೀ, ಉಪಾಧ್ಯಕ್ಷ ಎರಿಕ್ ಟರಾಂಟೋ,  ಡೇವ್ ಹೆನ್ರಿ, ಸಿಐಒ ಮಾಧುರಿ ಆಂಡ್ರೂಸ್ ಇದ್ದರು. ರಾಜ್ಯದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Key words: Minister -MB Patil- invited-Optive Company – R&D center – state.

ENGLISH SUMMARY…

Karnataka delegation holds talks with US-based semiconductor companies MKS Instruments, Orbia, and Aptiv PLC

Industries Minister invites Aptiv PLC to set up R&D centres in Mysuru, and Hubballi-Dharwad

Boston: Large and Medium Industries Minister MB Patil who is leading the Karnataka delegation that is on the USA visit invited global leading automotive technology supplier Aptiv PLC to explore the possibility of setting up R&D centres in Mysuru, and Hubballi-Dharwarda.

Holding talks with the representatives of the company on Wednesday, he presented ideas about the development of a local supplier base for semiconductors. Further, establishing connections with Original Equipment Manufacturers (OEM). and assembly, testing, marking, and packaging (ATMP) for Aptiv’s products were also actively discussed.

Irish-American company Aptiv PLC which is spearheading the electrified, and software-defined future of mobility has currently a technology centre in Bengaluru housing over 2,500 engineers and technologists.

Besides, keeping the semiconductor industry as its focal point, the delegation discussed possibilities with leading foundational technology solutions provider MKS Instruments to deepen investment ties in Karnataka in the semiconductor sector.

During the meeting, MB Patil emphasised promising opportunities for technology advancement in vacuum and photonics along with the expansion of software engineering and the availability of a skilled workforce.

The meeting also mulled over initiatives to establish connections with potential suppliers for MKS along with conversations regarding corporate tax rates, wages, and intellectual property rights.

In a meeting with fluorinated solutions provider Orbia, the focus was on exploring the potential use of fluorine in energy materials. Further, opportunities for collaborations within the EV value chain, ethylene production, and the manufacturing of pipes for drip irrigation projects were also deliberated.

Holding talks with American financial services and bank holding company State Street, the Minister drew attention to India’s financial industry and its potential for the growth of financial services assets. He also explained the government support for banking licenses streamlining approval processes for joint ventures to improve ease of doing business and assistance in talent acquisition for Global Capability Centers.

Kevin C. Klein, Head of Global Public Policy from Aptiv PLC, senior officials of MKS Instruments John T.C. Lee, President & CEO, Eric Taranto, Executive Vice President, Dave Henry, Executive Vice President, Madhuri Andrews, Chief Information Officer were among those who attended the meeting. S.Selvakumar, Principal Secretary, and Gunjan Krishna, Commissioner, Department of Industries were present.