Sunday, August 9, 2026

BDA Apartments

Home Front Page ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ- ಸಚಿವ ಕೆ.ಎಚ್ ಮುನಿಯಪ್ಪ

ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮೇ,9,2026 (www.justkannada.in): ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಎಲ್ಲವನ್ನೂ ಹೈಕಮಾಂಡ್  ನಾಯಕರು ತೀರ್ಮಾನ ಮಾಡುತ್ತಾರೆ.  ಮುಂದುವರೆಯುತ್ತಾರಾ ಬದಲಾಗುತ್ತಾರಾ ಅವರೇ ತಿಳಿಸುತ್ತಾರೆ. ಈ ತಿಂಗಳ ಅಂತ್ಯಕ್ಕೆ ಎಲ್ಲಾ ಗೊಂದಲ ಬಗೆಹರಿಯಬಹುದು.  ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ನೋಡಬೇಕು ಎಂದರು.

ರಾಜ್ಯದಲ್ಲಿ ಗೃಹ ಬಳಕೆ ಸಿಲಿಂಡರ್ ಸಮಸ್ಯೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ಸ್ವಲ್ಪ ಸಮಸ್ಯೆ ಆಗುತ್ತಿದೆ. ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೆಎಚ್ ಮುನಿಯಪ್ಪ ಎಚ್ಚರಿಸಿದರು.

Key words:  leadership Change, resolved, this month, Minister, K.H. Muniyappa