Friday, August 7, 2026

BDA Apartments

Home Front Page ಹಕ್ಕಿಜ್ವರದ ಬಗ್ಗೆ ಆತಂಕ ಬೇಡ: ಎಚ್ಚರಿಕೆ ವಹಿಸಿ- ಸಚಿವ ದಿನೇಶ್ ಗುಂಡೂರಾವ್

ಹಕ್ಕಿಜ್ವರದ ಬಗ್ಗೆ ಆತಂಕ ಬೇಡ: ಎಚ್ಚರಿಕೆ ವಹಿಸಿ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮಾರ್ಚ್,5,2025 (www.justkannada.in): ಹಕ್ಕಿಜ್ವರವು ಮನುಷ್ಯರಿಗೆ ಹರಡುವುದು ಅಪರೂಪ, ಈ ಬಗ್ಗೆ ಆತಂಕ ಬೇಡ, ಆದರೆ ಎಚ್ಚರಿಕೆ ವಹಿಸಿಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಕುರಿತು ಟ್ವಿಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್,  ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದೆ. ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ.‌ ಹಾಗಾಗಿ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಆದರೂ ಮೊಟ್ಟೆ ಮತ್ತು ಮಾಂಸವನ್ನು ಸೇವಿಸುವಾಗ ಕೆಲ ಎಚ್ಚರಿಕೆಗಳನ್ನು ಪಾಲಿಸಬೇಕು. ಮೊಟ್ಟೆ ಮತ್ತು ಮಾಂಸವನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಬೇಯಿಸಿ ಸೇವಿಸಬೇಕು. ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

Key words: Don’t worry, bird flu, careful, Minister, Dinesh Gundu Rao