Saturday, September 5, 2026

BDA Apartments

Home Front Page ಬಿಜೆಪಿಯವರದ್ದು ತೀವ್ರಗಾಮಿ ಮನಸ್ಥಿತಿ: ಮುಸ್ಲೀಮರನ್ನ ಟಾರ್ಗೆಟ್ ಮಾಡಲಾಗುತ್ತಿದೆ- ಸಚಿವ ದಿನೇಶ್ ಗುಂಡೂರಾವ್

ಬಿಜೆಪಿಯವರದ್ದು ತೀವ್ರಗಾಮಿ ಮನಸ್ಥಿತಿ: ಮುಸ್ಲೀಮರನ್ನ ಟಾರ್ಗೆಟ್ ಮಾಡಲಾಗುತ್ತಿದೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,29,2025 (www.justkannada.in): ಬಿಜೆಪಿಯವರದ್ದು ತೀವ್ರಗಾಮಿ ಮನಸ್ಥಿತಿ. ಮುಸ್ಲೀಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಕುರಿತು ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಘಟನೆ ನನಗೆ ಬಹಳ ನೋವಾಗಿದೆ. ಒಬ್ಬ ಅಮಾಯಕನನ್ನು ಹೊಡೆದು ಸಾಯಿಸಿದ್ದಾರೆ . ಇನ್ನೂ ಹೆಚ್ಚು ಜನರನ್ನ ಕೊಲ್ಲಲು ಆಲೋಚನೆ ಮಾಡಿದ್ದರು. ಹೆಚ್ಚು ಜನರನ್ನ ಕೊಲ್ಲಬೇಕು ಎಂಬ ಪಿತೂರಿ  ನಡೆತಿದೆ. ಅಲ್ಲಿ ಉಗ್ರವಾದ ವಾತಾವರಣ ಸೃಷ್ಠಿಸಲಾಗುತ್ತಿದೆ. ಭಯ ಆತಂಕ ಸೃಷ್ಟಿಸುವುದು ಗೊತ್ತಾಗಿದೆ ಎಂದರು.vtu

ಮುಸ್ಲೀಮರನ್ನ ಟಾರ್ಗೆಟ್ ಮಾಡುವುದೇ ಕೆಲಸ ಆಗಿದೆ. ಮುಸ್ಲೀಮರು ಏನೇ ಮಾತನಾಡಿದರೂ ಟಾರ್ಗೆಟ್‍ ಮಾಡಲಾಗುತ್ತಿದೆ.  ಬಿಜೆಪಿಯವರದ್ದು ತೀವ್ರಗಾಮಿ ಮನಸ್ಥಿತಿ. ಮುಸಲ್ಮಾನರು ಅಂದಾಕ್ಷಣ ಪಾಕಿಸ್ತಾನ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಈ ಕುರಿತು ಮತ್ತೊಮ್ಮೆ ಸಿಎಂ  ಜೊತೆ ಚರ್ಚಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Key words: BJP,  mindset, Muslims, targeted, Minister, Dinesh Gundu Rao