Thursday, September 17, 2026

BDA Apartments

ಆದಷ್ಟು ಬೇಗ ಮೇಕೆದಾಟು ಯೋಜನೆಗೆ ಅಂತಿಮ ಅನುಮತಿ ಪಡೆಯುತ್ತೇವೆ- ಸಿಎಂ ಬಸವರಾಜ...
Home Front Page ಆದಷ್ಟು ಬೇಗ ಮೇಕೆದಾಟು ಯೋಜನೆಗೆ ಅಂತಿಮ ಅನುಮತಿ ಪಡೆಯುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ.

ಆದಷ್ಟು ಬೇಗ ಮೇಕೆದಾಟು ಯೋಜನೆಗೆ ಅಂತಿಮ ಅನುಮತಿ ಪಡೆಯುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,18,2022(www.justkannada.in): ಆದಷ್ಟು ಬೇಗ ಮೇಕೆದಾಟು ಯೋಜನೆಗೆ ಅಂತಿಮ ಅನುಮತಿ ಪಡೆಯುತ್ತೇವೆ. ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಯತ್ನಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಆದಷ್ಟು ಬೇಗ ಯೋಜನೆಗೆ ಅಂತಿಮ ಅನುಮತಿ ಪಡೆಯುತ್ತೇವೆ. ಈ ಸಂಬಂಧ ಜಲಸಂಪನ್ಮೂಲ ಸಚಿವರು ಶೀಘ್ರವೇ ದೆಹಲಿಗೆ ಹೋಗಲಿದ್ದಾರೆ. ಅಧಿವೇಶನ ಮುಗಿದ ಬಳಿಕ ನಾನೂ ದೆಹಲಿಗೆ ಹೋಗುತ್ತೇನೆ.    ಸರ್ವಪಕ್ಷ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಕೃಷ್ಣಾ ಜಲವಿವಾದ ಬಗೆಹರಿಸಲೂ ಪ್ರಯತ್ನಸುಯತ್ತೇವೆ. ಹೊಸ ಜಸ್ಟೀಸ್ ಗಳನ್ನ ನೇಮಿಸಲು ಮನವಿ ಮಾಡಿದ್ದೇವೆ. ಆದಷ್ಟು ಬೇಗ ಅಂತರಾಜ್ಯ ಜಲ ವಿವಾದ ಬಗೆಹರಿಸಲು ವಿಪಕ್ಷಗಳು ಒತ್ತಡ ಹಾಕಿವೆ. ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿವೆ. ಅಗತ್ಯವಿದ್ದರೇ ಸರ್ವಪಕ್ಷ ನಿಯೋಗ ಕರೆದೊಯ್ಯುತ್ತೇವೆ ಎಂದರು.

Key words: mekedatu-project-CM -Basavaraja Bommai.