ಆರ್‌.ಧ್ರುವನಾರಾಯಣ ಮೇಕೆ ಮೇಯಿಸಲು ಮಾತ್ರ ಲಾಯಕ್: ವಿ.ಶ್ರೀನಿವಾಸಪ್ರಸಾದ್ ಆಕ್ರೋಶ

ಮೈಸೂರು, ಮಾರ್ಚ್ 19, 2022 (www.justkannada.in): ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌.ಧ್ರುವನಾರಾಯಣ ಮೇಕೆ ಮೇಯಿಸಲು ಮಾತ್ರ ಲಾಯಕ್. ಅವರನ್ನು ಸಂಸದರನ್ನಾಗಿ ಮಾಡಿ ತಪ್ಪು ಮಾಡಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.

ತಿ ನರಸೀಪುರದಲ್ಲಿ ಮಾತನಾಡಿದ ಅವರು, ಮೇಕೆದಾಟಿಗೆ ಆಗಮಿಸುವ ಕಾರ್ಯಕರ್ತರಿಗೆ ಪಲಾವ್ ಮಾಡಿಕೊಡುವ ಜವಾಬ್ದಾರಿಯನ್ನ ಡಿಕೆ ಶಿವಕುಮಾರ್ ಧ್ರುವನಾರಾಯಣ್‌ಗೆ ಕೊಟ್ಟಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಧ್ರುವನಾರಾಯಣ್ ಎಲ್ಲರ ಮೇಲು ಬಂದು ಚಾಡಿ ಹೇಳುತ್ತಾನೆ. ನಾಯಕರ ಮಧ್ಯೆಯೇ ಬಿರುಕು ಸೃಷ್ಟಿಸುತ್ತಾನೆ. ಕೇವಲ ಸುಳ್ಳು ಹೇಳಿಕೊಂಡು ಸುತ್ತೋದೆ ಧ್ರುವನಾರಾಯಣ್ ಕೆಲಸ ಎಂದು ವಾಗ್ದಾಳಿ ನಡೆಸಿದರು.