Saturday, September 12, 2026

BDA Apartments

ಮೈಸೂರು ಮೇಯರ್ ಸದಸ್ಯತ್ವ ರದ್ದು ಹಿನ್ನೆಲೆ: ಮೇಯರ್ ಸ್ಥಾನಕ್ಕೆ ಚುನಾವಣೆ ದಿನ...
Home Front Page ಮೈಸೂರು ಮೇಯರ್ ಸದಸ್ಯತ್ವ ರದ್ದು ಹಿನ್ನೆಲೆ: ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್.

ಮೈಸೂರು ಮೇಯರ್ ಸದಸ್ಯತ್ವ ರದ್ದು ಹಿನ್ನೆಲೆ: ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್.

ಮೈಸೂರು,ಜೂನ್,2,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಕಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಇದೀಗ ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್ ಆಗಿದೆ.jk

ಈ ಸಂಬಂಧ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿ ಮಾಹಿತಿ ನೀಡಿದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್.  ಮೇಯರ್ ರುಕ್ಕಿಣಿ ಮಾದೇಗೌಡ ಸದಸ್ಯತ್ವ ರದ್ದು ಹಿನ್ನೆಲೆ, ಮೇಯರ್ ಸ್ಥಾನಕ್ಕೆ ಜೂನ್ 11ರಂದು  ಚುನಾವಣೆ ನಿಗದಿ ಮಾಡಿದ್ದೇವೆ. ಚುನಾವಣೆ ನಡೆಯುವರೆಗೂ ಉಪಮೇಯರ್‌ ಗೆ ಅಧಿಕಾರವಿರುತ್ತದೆ ಎಂದರು.

ನಿನ್ನೆ ರಾತ್ರಿ ನಮಗೆ ರುಕ್ಕಿಣಿ ಮಾದೇಗೌಡರ ಸದಸ್ಯ ರದ್ದು ಆದೇಶ ಬಂದಿದೆ, ಹೀಗಾಗಿ ತಕ್ಷಣ ನಾವು ಪ್ರಾದೇಶಿಕ ಆಯಕರಿಗೆ ಪತ್ರ ಬರೆದಿದ್ದೆವು. ಇಂದು ಚರ್ಚೆಗೆ ಪ್ರಾದೇಶಿಕ ಆಯುಕ್ತರು ಕರೆದಿದ್ದರು. ಇದೀಗ ಚರ್ಚೆ ಮಾಡಲಾಗಿದ್ದು,  ಕಾಯ್ದೆಯಲ್ಲಿ ಮತ್ತೆ ಚುನಾವಣೆಗೆ ಅವಕಾಶ ಇದೆ ಎಂಬುದನ್ನು ಪರಿಶೀಲಿಸಿ  ಜೂನ್ 11ರಂದು ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದೇವೆ. ಚುನಾವಣೆಯಲ್ಲಿ ಕೊರೋನಾ ನಿಯಮಗಳನ್ನ ಪಾಲಿಸುತ್ತೇವೆ.  ಎಲ್ಲರಿಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ಚುನಾವಣೆ ನಡೆಸುತ್ತೇವೆ ಎಂದು ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಹಿತಿ ನೀಡಿದರು.workers-died-corona-5-lakhs-compensation-mysore-city-corporation-commissioner-shilpanag

ಇನ್ನು ಲಾಕ್ ಡೌನ್ ಮುಂದುವರೆದರೆ  ಪ್ರಾದೇಶಿಕ ಆಯುಕ್ತರ ಜತೆ ಚರ್ಚಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ‘ಜಸ್ಟ್ ಕನ್ನಡ ಡಾಟ್ ಇನ್’ ಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು.

key words: Mayor -Rukkini Madhagowda -membership -cancellation -Fix election- date