ಸದ್ದಿಲ್ಲದೇ ಬಿಡುಗಡೆಗೆ ಸಿದ್ಧವಾಗಿದೆ ಮಾಸ್ಟರ್ ಆನಂದ್ ‘ಹಗಲುಗನಸು’

ಬೆಂಗಳೂರು, ನವೆಂಬರ್ 29, 2019 (www.justkannada.in): ಮಾಸ್ಟರ್ ಆನಂದ್ ಸದ್ದಿಲ್ಲದೇ ಒಂದು ಸಿನಿಮಾ ಮುಗಿಸಿದ್ದು, ಅದು ಬಿಡುಗಡೆಯಾಗುವ ಹಂತದಲ್ಲಿದೆ.

ಅಮೃತವರ್ಷಿಣಿ, ಹಾಲಿವುಡ್, ಅಭಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದಲ್ಲಿ ಮಾಸ್ಟರ್ ಆನಂದ್ ನಾಯಕರಾಗಿ ನಟಿಸಿರುವ ಸಿನಿಮಾ ‘ಹಗಲುಗನಸು’.

ಇದು ಡಿಸೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು, ಆನಂದ್ ಗೆ ಜೋಡಿಯಾಗಿ ಸನಿಹಾ ಯಾದವ್ ನಟಿಸಿದ್ದಾರೆ.