ಸಾನಿಯಾ ಮಿರ್ಜಾ ಕಮ್’ಬ್ಯಾಕ್ !

ಬೆಂಗಳೂರು, ನವೆಂಬರ್ 29, 2019 (www.justkannada.in): ಸಾನಿಯಾ ಮಿರ್ಜಾ ಮುಂದಿನ ಜನವರಿಯಲ್ಲಿ ನಡೆಯಲಿರುವ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೂರ್ನಿಯಲ್ಲಿ ವೃತ್ತಿಪರ ಟೆನಿಸ್‌ಗೆ ಮರಳುತ್ತಿದ್ದಾರೆ.

2017ರ ಚೀನ ಓಪನ್‌ ಬಳಿಕ ಸಾನಿಯಾ ಮಿರ್ಜಾ ಯಾವುದೇ ಟೆನಿಸ್‌ ಕೂಟಗಳಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರು ಗಂಡು ಮಗುವಿನ ತಾಯಿಯಾಗಿದ್ದರು.

ನಾನು ಹೋಬರ್ಟ್‌ ಪಂದ್ಯಾವಳಿಯಲ್ಲಿ ಆಡಲಿದ್ದೇನೆ. ಬಳಿಕ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲೂ ಆಡುವ ಯೋಜನೆಯಲ್ಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.