‘ಮಾರುತಿ ಸುಜುಕಿ ಇಂಡಿಯಾ’ : 2020ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ

 

ನವದೆಹಲಿ, ಡಿ.03, 2019 : (www.justkannada.in news ) ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ‘ಮಾರುತಿ ಸುಜುಕಿ ಇಂಡಿಯಾ’ 2020 ರಿಂದ ತನ್ನ ಕಾರುಗಳ ಬೆಲೆ ಹೆಚ್ಚಳ ಮಾಡಲು ಉದ್ದೇಶಿಸಿದೆ.
ಈ ಸಂಬಂಧ ಮಂಗಳವಾರ ಮಾಹಿತಿ ನೀಡಿದ ಮಾರುತಿ ಸುಜಿಕಿ ಇಂಡಿಯಾ ಸಂಸ್ಥೆ ಹೇಳಿದಿಷ್ಟು….
ಉತ್ಪಾದನಾ ವೆಚ್ಚ ಸರಿದೂಗಿಸಲು 2020ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ. ಉತ್ಪಾದನೆಯ ವೆಚ್ಚ ಹೆಚ್ಚಳದಿಂದ ಕಾರು ತಯಾರಿಕೆಗೆ ಆಗುತ್ತಿರುವ ಖರ್ಚು ಕಳೆದ ವರ್ಷದಿಂದ ಕಂಪನಿಯ ಮೇಲೆ ಹೊರೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಕಾರುಗಳ ಬೆಲೆ ಏರಿಕೆ ಮಾಡುವ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ.
ಪ್ರಸ್ತುತ ಕಂಪನಿ ಆರಂಭಿಕ ಹಂತದ ಪುಟ್ಟ ಆಲ್ಟೊ ಕಾರಿನಿಂದ ಹಿಡಿದು ಪ್ರೀಮಿಯಂ, ಬಹುಪಯೋಗಿ ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ರೂ.2.89 ಲಕ್ಷದಿಂದ ರೂ.11.47 ಲಕ್ಷ (ದೆಹಲಿ ಎಕ್ಸ್‌–ಷೋರೂಂ ಬೆಲೆ) ವರೆಗಿನ ಹಲವು ಮಾದರಿಯ ಕಾರುಗಳನ್ನು ಕಂಪನಿ ತಯಾರಿಸುತ್ತಿದೆ.

key words : maruti-suzuki-car-rate-hike-from-2020

Maruti Suzuki India today announced that it will increase the prices of its various models from January 2020 owing to an increase in the input costs. However, the carmaker has not specified the vehicles that will see their prices going up. Maruti Suzuki India sells vehicles through its Arena and Nexa channels.