ಸಿಡಿ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸದಂತೆ ಸಿಎಂ ಒತ್ತಡ- ಯುವತಿ ಪರ ವಕೀಲ ಜಗದೀಶ್…

ಬೆಂಗಳೂರು,ಏಪ್ರಿಲ್,1,2021(www.justkannada.in):  ಸಿಡಿ ಪ್ರಕರಣದಲ್ಲಿ ಗಂಭೀರ ಪ್ರಕರಣ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನ ಸಿಎಂ ಪ್ರಚಾರಕ್ಕೆ ಕರೆದಿದ್ದಾರೆ. ಈ ಮೂಲಕ ಆರೋಪಿಯನ್ನ ಬಂಧಿಸದಂತೆ ಒತ್ತಡ ಹಾಕಿದ್ದಾರೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಯುವತಿ ಪರ ವಕೀಲ ಜಗದೀಶ್, ಎಸ್ ಐಟಿ ಅಧಿಕಾರಿಗಳು ನಾಳೆ ಆರೋಪಿಯನ್ನ ಬಂಧಿಸಲಿ. ನಾಳೆ  ರಮೇಶ್ ಜಾರಕಿಹೊಳಿಯನ್ನವಿಚಾರಣೆಗೆ ಕರೆದಿದ್ದಾರೆ.  ಈ ವೇಳೆ ರಮೇಶ್ ಜಾರಕಿಹೊಳಿಯನ್ನ ಬಂಧಿಸಲಿ ಎಂದು ಆಗ್ರಹಿಸಿದರು.

 CM -pressures -accused - arrest - CD case-lawyer-Jagadish
ಕೃಪೆ-internet

ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ.  ಆದ್ರೆ ಆರೋಪಿಯನ್ನ ನಿರಪರಾಧಿಯನ್ನ ಸಿಎಂ ನೋಡ್ತಿದ್ದಾರೆ, ಗಂಭೀರ ಪ್ರಕರಣ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನ ಪ್ರಚಾರಕ್ಕೆ ಕರೆದಿದ್ದಾರೆ.  ಈ ಮೂಲಕ ಆರೋಪಿಯನ್ನ ಬಂಧಿಸದಂತೆ ಸಿಎಂ ಒತ್ತಡ ಹಾಕಿದ್ದಾರೆ ಎಂದು ವಕೀಲ ಜಗದೀಶ್ ಕುಮಾರ್ ಆರೋಪಿಸಿದ್ದಾರೆ.

Key words: CM -pressures -accused – arrest – CD case-lawyer-Jagadish