ತಿ.ನರಸೀಪುರ ಮುಡುಕುತೊರೆ ಪರ್ವತ ಪರಿಷೆ ರದ್ದು

ಮೈಸೂರು, ಏಪ್ರಿಲ್ 16, 2020 (www.justkannada.in): ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಏಪ್ರಿಲ್ 20 ರಂದು ಪರ್ವತ ಪರಿಷೆ (ಚಿಕ್ಕಜಾತ್ರೆ) ನಡೆಯಬೇಕಿದ್ದು, ಕೋರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಯಾವುದೇ ಜಾತ್ರೆಯನ್ನು ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

ಆದ್ದರಿಂದ ಏಪ್ರಿಲ್ 19 ಹಾಗೂ 20 ರಂದು ನಡೆಯಲಿರುವ ಪರ್ವತ ಪರಿಷೆ (ಚಿಕ್ಕಜಾತ್ರೆ)ಗೆ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಉಪವಿಭಾಗಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದೇವಾಲಯದಲ್ಲಿ ಧಾರ್ಮಿಕ‌ ವಿಧಿವಿಧಾನಗಳನ್ನು ಅರ್ಚಕರು ಮಾತ್ರ ನೆರವೇರಿಸುತ್ತಾರೆ. ಆದರೆ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.