ಮೈಸೂರಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿದ್ದವಾಗ್ತಿವೆ ಮಾಸ್ಕ್‌

ಮೈಸೂರು, ಏಪ್ರಿಲ್ 16, 2020 (www.justkannada.in): ಮೈಸೂರಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿದ್ದವಾಗ್ತಿದೆ ಮಾಸ್ಕ್‌ಗಳು…

ಕೇವಲ 12ರೂ ಮತ್ತು 15ರೂಗೆ ಸಿಗಲಿದೆ ಉತ್ತಮವಾದ ಮಾಸ್ಕ್ ಸಿದ್ದ ಮಾಡಲಾಗುತ್ತಿದೆ. ಮೈಸೂರಿನ ಕಂಠಿ ಯೂನಿಫಾರ್ಮ್ಸ್‌ ಗಾರ್ಮೆಂಟ್ಸ್ ನಿಂದ ಸಿದ್ದಗೊಳ್ಳುತ್ತಿರೋ ಮಾಸ್ಕ್‌ಗಳು.

ಉದಯಗಿರಿಯ ಮುಖ್ಯರಸ್ತೆಯಲ್ಲಿರೋ ಕಂಠಿ ಯೂನಿಫಾರ್ಮ್ಸ್ ಗಾರ್ಮೆಂಟ್ಸ್ ನಲ್ಲಿ ಲಾಕ್ ಡೌನ್‌ನಿಂದ ತೊಂದರೆಯಾದ ಕೆಲಸಗಾರರಿಗಯ ಮನೆಯಲ್ಲೇ ಕೆಲಸ ನೀಡಲಾಗುತ್ತಿದೆ.

ಹೊಲಿಗೆ ಯಂತ್ರ ಇಲ್ಲದ ಇಬ್ಬರಿಗೆ ಮಾತ್ರ ಗಾರ್ಮೆಂಟ್ಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಿದ್ದ ಮಾಡ್ತಿದ್ದಾರೆ ಮಾಸ್ಕ್.

ಸಿಂಗಲ್ ಲೆಯರ್ 12ರೂ, ಡಬಲ್ ಲೆಯರ್ ಮಾಸ್ಕ್ 15ರೂ.
ಒಂದು ಲಕ್ಷ ಮಾಸ್ಕ್ ಮಾಡೋ ಗುರಿ ಹೊಂದಿರೋ ದಯಾನಂದ್ ಅವರು ದಯಾನಂದ್ ಯೂನಿಫಾರ್ಮ್ಸ್ ಗಾರ್ಮೆಂಟ್ಸ್ ಮಾಲೀಕ.

ದೇಶದ ಹಾಗೂ ಜನರ ಹಿತ ಮುಖ್ಯ. ಬೇಡಿಕೆ ಹೆಚ್ಚಾದಂತೆ ಮಾಸ್ಕ್ ತಯಾರಿಸಲು ಸಿದ್ದತೆ ನಡೆದಿದೆ. ನನಗೆ ಲಾಭ ಬೇಡ, ಇದನ್ನ ನಂಬಿದವರ ಹೊಟ್ಟೆಪಾಡು ಜೀವನ ಮುಖ್ಯ.
ಹಾಗಾಗಿ ಮಾಸ್ಕ್ ತಯಾರಿಸಿ ಜನರಿಗೆ ಅನುಕೂಲವಾಗಲು ಈ ಪ್ಲ್ಯಾನ್ ಎಂದ ಗಾರ್ಮೆಂಟ್ಸ್ ಮಾಲೀಕ ದಯಾನಂದ.