ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ…

ಮೈಸೂರು,ಮಾರ್ಚ್,30,2021(www.justkannada.in): ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಆತನ ಬಳಿ ಇದ್ದ ಮಾದಕ ವಸ್ತು, ನಗದು ಮತ್ತು ಮೊಬೈಲ್ ಅನ್ನ ವಶಕ್ಕೆ ಪಡೆದಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಆಲನಹಳ್ಳಿಯ ನೇತಾಜಿನಗರದ ಸುಮೇರರಾಮ್ (35) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 10,000 ರೂ ಬೆಲೆ ಬಾಳುವ ಮಾದಕ ವಸ್ತು, ಅಫೀಮಿನಿಂದ ಮಾಡಿರುವ 257 ಗ್ರಾಂ ತೂಕದ ಮಿಶ್ರಣ, 2100 ರೂ ನಗದು, 1 ಮೊಬೈಲ್ ಫೋನ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.Man -arrested – selling- marijuana - Mysore

ಮೂಲತಃ ರಾಜಸ್ಥಾನ ರಾಜ್ಯದವನಾದ ಆರೋಪಿ ಸುಮೇರರಾಮ್, ಮೈಸೂರು ಬೆಂಗಳೂರು ರಸ್ತೆಯ ಲಾಯಲ್ ವರ್ಲ್ಡ್ ಬಳಿ ಗಾಂಜಾ ಮಾರುತ್ತಿದ್ದ. ಈ ನಡುವೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಸಿಸಿಬಿ ಪೊಲೀಸರ ಕೈಗೆ ಆರೋಪಿ ಸುಮೇರರಾಮ್ ರೆಡ್ ಹ್ಯಾಂಡಾಗಿ ಮಾಲು ಸಮೇತ ಸಿಕ್ಕಿಬಿದ್ದನು.

Key words: Man -arrested – selling- marijuana – Mysore