ಮಲಯಾಲಂ ನಿರ್ದೇಶಕ ನರನಿಪುಲ ಶಾನವಾಸ್ ನಿಧನ

ಬೆಂಗಳೂರು,ಡಿಸೆಂಬರ್,24,2020(www.justkannada.in) : ಮಲಯಾಲಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ನರನಿಪುಲ ಶಾನವಾಸ್ (37) ರಾತ್ರಿ ನಿಧನರಾಗಿದ್ದಾರೆ.Teachers,solve,problems,Government,bound,Minister,R.Ashok

ಕಳೆದ ಸೋಮವಾರ(ಡಿ.21)ರಂದು ಚಿತ್ರೀಕರಣ ಸೆಟ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಮುಂದಿನ ಚಿತ್ರ ಗಾಂಧಿರಾಜನ್ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೆ ಈಡಾದ ಅವರನ್ನು ಕೊಯಮ್ಮತ್ತೂರಿನ ಕೆಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ತಡರಾತ್ರಿ ನಿಧನರಾಗಿದ್ದಾರೆ.

Malayalam-Director-Naranipula-Shanawas-passes- away

ಶಾನವಾಸ್ ಅವರ ಈ ಹಿಂದಿನ ಚಿತ್ರ ‘ಸುಫಿಯುಮ್ ಸುಜಾತಯುಮ್’ ಹಿಟ್ ಆಗಿತ್ತು. ಜಯಸೂರ್ಯ, ಅಸಿತಿ ರಾವ್ ಹೈದರಿ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ ಹಿಟ್ ಆಗಿತ್ತು. ಶಾನವಾಸ್ ನಿರ್ದೇಶನದ ಮೊದಲ ಚಿತ್ರ ‘ಕಾರಿ’ 2015ರಲ್ಲಿ ಬಿಡುಗಡೆಯಾಗಿತ್ತು.

 

Malayalam-Director-Naranipula-Shanawas-passes- away

ನರನಿಪುಲ ಶಾನವಾಸ್ ನಿಧನಕ್ಕೆ ಅದಿತಿ ರಾವ್ ಹೈದರಿ, ನಿರ್ಮಾಪಕ ವಿಜಯ್ ಬಾಬು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

key words : Malayalam-Director-Naranipula-Shanawas-passes- away