ಚಯ್ಯಾ.. ಚಯ್ಯಾ… ಹಾಡಿಗೆ ಮರಳಿದ ಮಲೈಕಾ

ಮುಂಬೈ:ಜುಲೈ-20:(www.justkannada.in) ಬಾಲಿವುಡ್ ನಟಿ ಮಲೈಕಾ ಅರೋರಾ, ಡಾನ್ಸ್ ಇಂಡಿಯಾ ಡಾನ್ಸ್ ಕಾರ್ಯಕ್ರಮದಲ್ಲಿ 1998ರ ’ದಿಲ್ ಸೇ’ ಚಿತ್ರದಲ್ಲಿ ರೈಲಿನ ಮೇಲೆ ನಿಂತು ಚಯ್ಯಾ.. ಚಯ್ಯಾ … ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ತಮಗಾದ ಅನುಭವವನ್ನು ಮೆಲುಕುಹಾಕಿದ್ದಾರೆ.

ಝಿ ಟಿವಿಯಲಿ ಪ್ರಸಾರವಾಗುವ ಡಾನ್ಸ್ ಇಂಡಿಯಾ ಡಾನ್ಸ್ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಚಯ್ಯಾ ಚಯ್ಯಾ ಹಾಡಿಗೆ ಹೆಜ್ಜೆಹಾಕಿದಾಗ, ಮಲೈಕಾ ತನ್ನ ಹಳೆಯ ನೆನಪುಗಳ ಬುತ್ತಿ ತೆರೆದಿಟ್ಟರು. ಮಣಿರತಂ ನಿರ್ದೇಶ, ಸಂತೋಷ್ ಶಿವನ್ ಸಿನಿಮಾಟೋಗ್ರಫಿಯ ಶಾರುಖ್ ಖಾನ್ ಅಭಿನಯದ ದಿಲ್ ಸೇ ಚಿತ್ರದ ಈ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ತಾವು ತುಂಬಾ ಸಣ್ಣಗಿದ್ದುದಾಗಿ ಹಾಗೂ ಚಲಿಸುವ ರೈಲಿನ ಮೇಲೆ ನಿಂತು ಡಾನ್ಸ್ ಮಾಡುವುದು ನಿಜಕ್ಕೂ ನಮಗೆ ಒಂದು ದೊಡ್ಡ ಚಾಲೆಂಜ್ ಆಗಿತ್ತು ಎಂಬುದಾಗಿ ಹೇಳಿದ್ದಾರೆ.

ಅಂದು ಚಲಿಸುತ್ತಿದ್ದ ರೈಲಿನ ಮೇಲೆ ಡಾನ್ಸ್ ಮಾಡುವಾಗ ಗಾಳಿಯ ರಭಸಕ್ಕೆ ತನಗೆ ನಿಂತು ಸ್ಟೆಪ್ ಹಾಕುವುದು ಕಷ್ಟಸಾಧ್ಯವಾಗಿತ್ತು. ಡಾನ್ಸ್ ಮಾಡುವಾಗ ತಾವು ಹಲವುಬಾರಿ ಬಿದ್ದು ಗಾಯಮಾಡಿಕೊಂಡಿದ್ದಾಗಿ, ಕೊನೆಗೆ ತಮ್ಮ ಸೊಂಟದ ಸುತ್ತಲೂ ಒಂದು ಹಗ್ಗವನ್ನು ಬಿಗಿದು ರೈಲಿಗೆ ಕಟ್ಟಿ ಚಿತ್ರೀಕರಣ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಹೀಗೆ ಹಗ್ಗ ಕಟ್ಟಿ ಡಾನ್ಸ್ ಮಾಡಿದ್ದರಿಂದ ಹಗ್ಗದಿಂದ ತರಚಿ ಗಾಯವಾಗಿ, ರಕ್ತಬರುತ್ತಿತ್ತು. ಅಂದು ಸೆಟ್ ನಲ್ಲಿ ಹಲವರು ನನಗೆ ಕಾಲುಗಳನ್ನು ಒತ್ತುತ್ತಿದ್ದರು, ಇನ್ನು ಕೆಲವರು ನನಗೆ ಊಟವನ್ನು ತಿನ್ನಿಸುತ್ತಿದ್ದರು. ಹೀಗೆ ಸೆಟ್ ನಲ್ಲಿದ್ದ ಎಲ್ಲರೂ ತನ್ನನ್ನು ಆದರದಿಂದ ಚೆನ್ನಾಗಿ ನೋಡಿಕೊಂಡಿದ್ದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಚಯ್ಯಾ.. ಚಯ್ಯಾ… ಹಾಡಿಗೆ ಮರಳಿದ ಮಲೈಕಾ

Malaika Arora goes ‘Chaiyya Chaiyya’ again